ಫೋರ್ಥ್ ಡೈಮೆನ್ಷನ್ ಸಂಸ್ಥೆಗೆ 11ರ ಸಂಭ್ರಮ: ದೇಶದ ನಂ.1 ಮಾಧ್ಯಮ ಹೊರಗುತ್ತಿಗೆ ಸಂಸ್ಥೆ

Fourth dimension
Published on

ಬೆಂಗಳೂರು: ಚೆನ್ನೈ ಮೂಲದ ಮಾಧ್ಯಮ ಹೊರಗುತ್ತಿಗೆ ಸಂಸ್ಥೆ ಫೋರ್ಥ್ ಡೈಮೆನ್ಷನ್ ಮೀಡಿಯಾ ಸಲ್ಯುಷನ್ಸ್ ಫೆ.7ರಂದು 11ನೇ ವರ್ಷದ ಸಂಭ್ರವನ್ನಾಚರಿಸುತ್ತಿದೆ.

ಎಸ್‌ಆರ್‌ಎಂ ಗ್ರೂಪ್‌ನ ಅಂಗಸಂಸ್ಥೆಯಾದ ಫೋರ್ಥ್ ಡೈಮೆನ್ಷನ್ ಮೀಡಿಯಾ ಸಲ್ಯುಷನ್ಸ್ ಕೇವಲ 5 ಸದಸ್ಯರೊಂದಿಗೆ ಆರಂಭವಾಗಿ ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವುದರ ಜತೆಗೆ ಚೆನ್ನೈ, ಮುಂಬೈ, ದೆಹಲಿ, ಬೆಂಗಳೂರು, ಕೊಯಮತ್ತೂರು, ಮಧುರೈ ಹಾಗೂ ತಿರುಚಿಗಳಲ್ಲಿ ಕಚೇರಿಯನ್ನು ಹೊಂದುವಷ್ಟು ಬೆಳವಣಿಗೆ ಕಂಡಿದೆ. ಟಿವಿ, ರೇಡಿಯೋ, ನಿಯತಕಾಲಿಕೆ, ಕೇಬಲ್, ಡಿಜಿಟಲ್, ಹೊರಾಂಗಣಗಳಲ್ಲಿ ಆಸ್ತಿ ಸಂಪಾದನೆ ಮಾಡಿದೆ ಹಾಗೂ ಈ ಮೂಲಕ ದೇಶದ ನಂ.1 ಮಾಧ್ಯಮ ಹೊರಗುತ್ತಿಗೆ ಸಂಸ್ಥೆಯಾಗಿ ರೂಪುಗೊಂಡಿದೆ.

ಇದೀಗ ಫೋರ್ಥ್ ಡೈಮೆನ್ಷನ್ ಸಂಸ್ಥೆಯು ಪುತಿಯಾ ತಲೈಮುರೈ ಹಾಗೂ ವಿ6 ನ್ಯೂಸ್‌ನಂತಹ ತಮಿಳು ಹಾಗೂ ತೆಲುಗಿನ ನಂ.1 ಚಾನೆಲ್‌ಗಳಿಗೆ ಹಾಗೂ ತಮಿಳು ಜಿಇಸಿಯ ಪುತು ಯುಗಮ್‌ಗಳಿಗೆ ಸೇವೆ ಒದಗಿಸುತ್ತಿದೆ. ಅಖಿಲ ಭಾರತ ಮಟ್ಟದಲ್ಲಿ ತನ್ನ ಜಾಹೀರಾತು ಮಾರಾಟ ಪಾಲುದಾರನಾಗಿ ಟಿವಿ5 ಕನ್ನಡದ ಜತೆಗೆ ಈಗಷ್ಟೆ ಸಹಿ ಮಾಡಿದ್ದು, ತಮಿಳುನಾಡು ಹಾಗೂ ಇನ್ನುಳಿದ ದಕ್ಷಿಣ ಭಾರತದಲ್ಲಿ ಡಿಜಿಟಲ್ ಗ್ರಾಹಕರನ್ನು ಹೊಂದುವತ್ತ ಸಾಗುತ್ತಿದೆ. ರಿಪಬ್ಲಿಕ್ ಟಿವಿ ನೆಟ್‌ವರ್ಕ್, ಇಇನ್ಫೆಟ್ ಮೀಡಿಯಾ ಸೇರಿ ಅನೇಕ ಸಂಸ್ಥೆಗಳಿಗೆ ಸೇವೆ ಒದಗಿಸುವುದರ ಜತೆಗೆ ಅನೇಕ ಪ್ರಮುಖ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಪರಿಣತೆ ಗಳಿಸಿದೆ.

ಇದೊಂದು ಸ್ಮರಣಾರ್ಹ ದಿನ ಹಾಗೂ ವರ್ಷ. ಈ ಬಾರಿ ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಹೆಚ್ಚು ಕಾರ್ಯಕ್ರಮಗಳು ಮತ್ತು ಶೃಂಗಗಳ ಆಯೋಜನೆ ಮೂಲಕ ಮತ್ತಷ್ಟು ವೇಗದಲ್ಲಿ ಸಾಗಲಿದ್ದೇವೆ ಎಂದು ಸಿಇಒ ಬಿ. ಶಂಕರ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net