ಸೆಮಿಫೈನಲ್ ಹಂತ ತಲುಪಿದ ನಾಲ್ಕು ತಂಡಗಳು

31spt1
ಸೋಮವಾರಪೇಟೆ ತಾಲೂಕಿನ ಗೌಡಳ್ಳಿ ಬಿಜಿಎಸ್ ಮೈದಾನದಲ್ಲಿ ಆಯೋಜಿಸಿದ್ದ ಮುಕ್ತ ಪುಟ್ಫಾಲ್ ಪಂದ್ಯಾಟಕ್ಕೆ ಉದ್ಯಮಿ ಪವನ್ ದೇವಯ್ಯ ಚಾಲನೆ ನೀಡಿದರು. ಮಂಜುನಾಥ್, ಗೋಪಾಲಕೃಷ್ಣ, ಭರತ್, ಆದರ್ಶ್ ಇದ್ದರು.
Published on

ಸೋಮವಾರಪೇಟೆ: ಗೌಡಳ್ಳಿ ಮತ್ತು ದೊಡ್ಡಮಳ್ತೆ ಹಿಂದು ಗೆಳೆಯರ ಬಳಗದ ವತಿಯಿಂದ ಗೌಡಳ್ಳಿ ಬಿಜಿಎಸ್ ಶಾಲಾ ಮೈದಾನದಲ್ಲಿ ನಡೆಯುತ್ತಿರುವ 6ನೇ ವರ್ಷದ ಮುಕ್ತ ಪುಟ್ಭಾಲ್ ಪಂದ್ಯಾವಳಿಯಲ್ಲಿ ಗೌಡಳ್ಳಿ ಎಫ್‌ಸಿ, ಕೋಟೆಯೂರು ಎಫ್‌ಸಿ, ಫ್ರೆಂಡ್ಸ್ ಎಫ್‌ಸಿ ಬೀಟಿಕಟ್ಟೆ, ನೀಲ್‌ಶಾಂತ್ ಬಾಯ್ಸ ತಂಡಗಳು ಸೆಮಿಫೈನಲ್ ಹಂತಕ್ಕೆ ತಲುಪಿವೆ.

ಕ್ವಾಟರ್ ಫೈನಲ್‌ನಲ್ಲಿ ಬೀಟಿಕಟ್ಟೆ ಎಫ್‌ಸಿ ತಂಡ ನವದುರ್ಗಾ ಪರಮೇಶ್ವರಿ ಎಫ್‌ಸಿ ತಂಡವನ್ನು 5-4 ಗೋಲುಗಳಿಂದ ಸೋಲಿಸಿ ಸೇಮಿಫೈನಲ್‌ಗೇರಿತು. ಕೋಟೆಯೂರು ಎಫ್‌ಸಿ ತಂಡ, ನಿಶಾಂತ್‌ಕಾಫಿ ಶನಿವಾರಸಂತೆ ತಂಡವನ್ನು 2-1 ಗೋಲುಗಳಿಂದ ಮಣಿಸಿತು. ನೀಲ್‌ಶಾಂತ್ ಎಫ್‌ಸಿ ತಂಡ, ಟೀಮ್ ಶುಂಠಿ ಎ ತಂಡವನ್ನು 4-1 ಗೋಲುಗಳಿಂದ ಸೋಲಿಸಿತು. ಗೌಡಳ್ಳಿ ಎಫ್‌ಸಿ ತಂಡ, ಫಾರ್ಮರ್ಸ್‌ ಕ್ಲಬ್ ದೊಡ್ಡಮಳ್ತೆ ತಂಡವನ್ನು 2-1 ಗೋಲುಗಳಿಂದ ಮಣಿಸಿತು.

ಭಾನುವಾರ ಬೆಳಿಗ್ಗೆ ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಎಚ್.ಮಂಜುನಾಥ್, ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೋಪಾಲಕೃಷ್ಣ, ಉದ್ಯಮಿ ಚಾಮೆರ ಪವನ್ ದೇವಯ್ಯ, ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ.ಭರತ್ ಕುಮಾರ್ ಅವರುಗಳು ಪಂದ್ಯಾಟಕ್ಕೆ ಚಾಲನೆ ನೀಡಿದರು.

ಸಭಾ ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಕೆ.ಪಿ.ಆದರ್ಶ್, ಉಪಾಧ್ಯಕ್ಷ ಎಸ್.ಎನ್.ಅಕಾಶ್, ಖಜಾಂಚಿ ಎಸ್.ಆರ್.ವಿನಯ್, ಕಾರ್ಯದರ್ಶಿ ಪ್ರಜ್ವಲ್ ಮತ್ತು ನಿರ್ದೇಶಕರುಗಳು ಇದ್ದರು.

ತೀರ್ಪುಗಾರರಾಗಿ ಗೌಡಳ್ಳಿ ಪ್ರವೀಣ್, ಮೆಲ್ವಿನ್, ಕರಣ್, ಅಜೇಶ್, ಅಭಿಲಾಷ್, ಶೇಷಪ್ಪ, ಸಂಕೇತ್ ಕಾರ್ಯನಿರ್ವಹಿಸಿದರು. 12 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ನೈಜೀರಿಯಾದ ವಿದೇಶಿ ಆಟಗಾರರು, ಗೋವಾ, ಕೇರಳ, ತಮಿಳುನಾಡು ರಾಜ್ಯಗಳ ಅಟಗಾರರು ವಿವಿಧ ತಂಡಗಳನ್ನು ಪ್ರತಿನಿಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net