

ಆಂಧ್ರಪ್ರದೇಶ: ಟಾಲಿವುಡ್, ಕಾಲಿವುಡ್, ಬಾಲಿವುಡ್ನ ನಾಲ್ಕು ಟಾಪ್ ನಟರ ಸಿನಿಮಾಗಳು ಮುಂದಿನ ವಾರದಲ್ಲಿ ಬಿಡುಗಡೆಗೊಳ್ಳಲಿದ್ದು, ಬಾಕ್ಸ್ ಆಫೀಸ್ನಲ್ಲಿ ಭಾರೀ ಪೈಪೋಟಿ ನಡೆಸಲು ಸಜ್ಜಾಗಿದೆ. ಯಾವ ಚಿತ್ರಗಳು, ಯಾವ ಸ್ಟಾರ್ಗಳ ಮಧ್ಯೆ ಘರ್ಷಣೆಯಾಗಲಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಸೂಪರ್ಸ್ಟಾರ್, ತಲೈವಾ ರಜಿನಿಕಾಂತ್ ಅಭಿನಯದ ಬಹುನಿರೀಕ್ಷಿತ 'ಜೈಲರ್' ಚಿತ್ರ ಆಗಸ್ಟ್ 10 ರಂದು ಬಿಡುಗಡೆಯಾಗಲಿದೆ. ತದನಂತರ ಆಗಸ್ಟ್ 11 ರಂದು ಮೆಗಾಸ್ಟಾರ್ ಚಿರಂಜೀವಿ ಅವರ 'ಭೋಲಾ ಶಂಕರ್', ಅಕ್ಷಯ್ ಕುಮಾರ್ ನಟನೆಯ 'OMG 2' ಮತ್ತು ಸನ್ನಿ ಡಿಯೋಲ್ ಆಕ್ಟ್ ಮಾಡಿರುವ 'ಗದರ್ 2' ಚಿತ್ರಗಳು ಬಹುತೇಕ ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಲಿದೆ. ಈ ಮೂಲಕ ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ ನೀಡುವುದರ ಜತೆಗೆ ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲಿ ಪೈಪೋಟಿ ಕೊಡಲು ಸಜ್ಜಾಗಿದೆ.
ನಾಲ್ವರು ಸ್ಟಾರ್ ನಟರಿಗೂ ಅವರದ್ದೇ ಆದ ವಿಶೇಷ ಅಭಿಮಾನಿಗಳ ಬಳಗವಿದ್ದು, ಯಾರ ಸಿನಿಮಾ ಎಷ್ಟು ಕಲೆಕ್ಷನ್ ಮಾಡಲಿದೆ, ಯಾವ ರೀತಿ ಕಮಾಲ್ ಮಾಡಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ,(ಏಜೆನ್ಸೀಸ್).