ಒಂದೇ ಸಮಯದಲ್ಲಿ ಗರ್ಭಿಣಿಯರಾದ ನಾಲ್ವರು ಸಹೋದರಿಯರು!

sisters pregnant
Published on: 

ನವದೆಹಲಿ: ಗರ್ಭಿಣಿಯರಾಗುವುದು ಮಹಿಳೆಯರಿಗೆ ಸಂಭ್ರಮ ಸಡಗರವಾಗಿರುತ್ತದೆ. ಒಂದೇ ಬಾರಿಗೆ ನಾಲ್ವರು ಸಹೋದರಿಯರು ಗರ್ಭಿಣಿಯರಾದ ಅಪರೂಪದ ಘಟನೆ ಕುಟುಂಬಸ್ಥರನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ.

ಕೇಲೀ ಸ್ಟೀವರ್ಟ್, ಜೇ ಗುಡ್‌ವಿಲ್ಲಿ, ಕೆರ್ರಿ-ಆನ್ ಥಾಮ್ಸನ್, ಮತ್ತು ಆಮಿ ಗುಡ್ವಿಲ್ಲಿ ಈ ನಾಲ್ವರು ಸಹೋದರಿಯರು ಒಟ್ಟಿಗೆ ಗರ್ಭಿಣಿಯರಾಗಿದ್ದಾರೆ. ಆದರೆ ಇವರ ಹೆರಿಗೆ ದಿನಾಂಕ ಮಾತ್ರ ಬೇರೆ ಬೇರೆನೇ ಇದೆ. ನಾಲ್ವರು ಸಹೋದರಿಯರು ಒಟ್ಟಿಗೆ ಗರ್ಭಧರಿಸಿರುವುದು ಕುಟುಂಬಸ್ಥರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಈ ಬಗ್ಗೆ ಸಹೋದರಿಯರು ಮಾತನಾಡಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಜನಿಸುತ್ತಿರುವ ಎಲ್ಲಾ ಮಕ್ಕಳು ಒಂದೇ ವಯಸ್ಸಿನ ಸೋದರಸಂಬಂಧಿಗಳನ್ನು ಹೊಂದಿರುತ್ತಾರೆ. ಈ ವರ್ಷ ಇನ್ನೂ ನಾಲ್ಕು ಮಕ್ಕಳು ನಮ್ಮ ಕುಟುಂಬಕ್ಕೆ ಬರಲಿದೆ. ಈ ವಿಚಾರವಾಗಿ ನಾವು ತುಂಬಾ ಸಂತೋಷವಾಗಿದ್ದೇವೆ ಎಂದು ಈ ನಾಲ್ವರು ಸಹೋದರಿಯರ ತಾಯಿ ಹೇಳಿಕೊಂಡಿದ್ದಾರೆ.

ಸಹೋದರಿಯರು ಒಟ್ಟಿಗೆ ತಾಯಿ ಆಗುತ್ತಿರುವ ಖುಷಿಗೆ ಒಂದು ಪಾರ್ಟಿಯನ್ನು ಆಯೋಜಿಸಲಾಗಿತ್ತು. ಕೇಲೀ ಮತ್ತು ಜೇ ಸಹೋದರಿಯರಿಬ್ಬರು ಗಂಡುಮಕ್ಕಳನ್ನು ನಿರೀಕ್ಷಿಸುತ್ತಿದ್ದಾರೆಂದು ಹೇಳಿಕೊಂಡಿದ್ದಾರೆ.

ನಾವು ನಾಲ್ವರು ಸಹೋದರಿಯರು ಹತ್ತಿರದಲ್ಲಿ ವಾಸಿಸುತ್ತೇವೆ. ಸುಮಾರು ಐದು ನಿಮಿಷಗಳ ಕಾಲ ಪ್ರತಿನಿತ್ಯ ನಡೆಯುತ್ತೇವೆ. ನಮ್ಮ ಅಮ್ಮ ತುಂಬಾ ಉತ್ಸುಕರಾಗಿದ್ದಾರೆ. ಮಕ್ಕಳು ನರ್ಸರಿ ಮತ್ತು ಶಾಲೆಗೆ ಹೋದ ನಂತರ ಎಲ್ಲರೂ ಒಟ್ಟಿಗೆ ಒಂದೇ ತರಗತಿಯಲ್ಲಿರುತ್ತಾರೆ ಎಂಬ ವಿಚಾರವನ್ನು ನಾನು ಪ್ರೀತಿಸುತ್ತೇನೆ. ನಮಗೆ ಜನಿಸುವ ಮಕ್ಕಳು ಉತ್ತಮ ಸ್ನೇಹಿತರಾಗುತ್ತಾರೆ ಎಂದು ನನಗೆ ಖಾತ್ರಿಯಿದೆ ಎಂದು ನಾಲ್ವರು ಗರ್ಭಿಣಿ ಸಹೋದರಿಯರು ಹೇಳಿಕೊಂಡಿದ್ದಾರೆ.