

ತುಮಕೂರು: ಜಿಲ್ಲೆಯಲ್ಲಿ ವಿವಿಧೆಡೆ ಸಂಭವಿಸಿರುವ ಪ್ರತ್ಯೇಕ ಅಪಘಾತಗಳಲ್ಲಿ ನಾಲ್ವರು ಶುಕ್ರವಾರ ಮೃತಪಟ್ಟಿದ್ದಾರೆ.
ಅಪಘಾತ 1: ತುಮಕೂರು ನಗರದ ರಾಷ್ಟ್ರೀಯ ಹೆದ್ದಾರಿ 48ರ ಟಾಟಾ ಶೋ ರೂಂ ಮುಂಭಾಗ ಶುಕ್ರವಾರ ಸಂಜೆ ಅಪರಿಚಿತ ವಾಹನ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ, ತುಮಕೂರು ತಾಲೂಕು ಬೇಗೂರಿನ ಪುನೀತ್‌ಕುಮಾರ್(28) ಮೃತ. ತುಮಕೂರು ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ 2: ತಿಪಟೂರು ತಾಲೂಕಿನ ಕರಡಾಳು ಬಳಿ ಅಪರಿಚಿತ ವಾಹನ ಡಿಕ್ಕಿಯಾಗಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ತಾಲೂಕಿನ ಶಾಂತನಹಳ್ಳಿಯ ಸದಾಶಿವಯ್ಯ (62) ಮೃತ.
ತಿಪಟೂರು ಗ್ರಾಮಾಂತರ ಪೊಲೀಸ್‌ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ 3: ಕುಣಿಗಲ್ ತಾಲೂಕಿನ ನಾಗೇಗೌಡನಪಾಳ್ಯದ ಬಳಿ ಸಂಭವಿಸಿರುವ ಮತ್ತೊಂದು ಅಪಘಾತದಲ್ಲಿ ಹಾಸನದ ಚೌಡನಕುಪ್ಪೆ ಯುವಕ ಅಭಿಷೇಕ್(23) ಸ್ಥಳದಲ್ಲಿಯೇ ಮೃತನಾಗಿದ್ದಾನೆ. ಬೈಕ್ ನಿಯಂತ್ರಣ ತಪ್ಪಿ ಟಿವಿಎಸ್ ಡಿವೈಡರ್ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ್ದು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ 4: ಕೊರಟಗೆರೆ ತಾಲೂಕು ತಣ್ಣೇನಹಳ್ಳಿ ರಸ್ತೆಯಲ್ಲಿ ಅಡ್ಡಬಂದ ಹಸುವಿಗೆ ಡಿಕ್ಕಿ ಹೊಡೆದು ನಲಕ್ಕುರುಳಿದ ಬೈಕ್ ಸವಾರ ಸ್ಥಳದಲ್ಲಿಯೇ ಮೃತನಾಗಿದ್ದಾನೆ. ಕಿಶೋರ್(30) ಮೃತ. ಕೊರಟಗೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.