

ನವದೆಹಲಿ: ಮಕ್ಕಳು ನಾವು ಹೇಳಿದ್ದನ್ನು ಗ್ರಹಿಸಿಕೊಳ್ಳಲು ಸರಿಸುಮಾರು ಒಂದು ವರ್ಷವಾದ್ರು ಬೇಕು ಎಂದು ವೈದ್ಯರು ಹೇಳುತ್ತಾರೆ. ಆದರೆ ಇಲ್ಲೊಂದು ಮಗು ನಾಲ್ಕು ತಿಂಗಳಿಗೆ ತಾಯಿ ಹೇಳುವುದನ್ನು ಗ್ರಹಿಸಿ ವಿಶ್ವದಾಖಲೆ ಮಾಡಿದೆ ಎಂದು ಹೇಳಿದರೆ ನಂಬುವುದು ಸ್ವಲ್ಪ ಕಷ್ಟವಾಗುತ್ತದೆ. ಆದರೂ ಇದು ಸತ್ಯ.
ಎನ್‌ಟಿಆರ್ ಜಿಲ್ಲೆಯ ನಂದಿಗಾಮಾದ ನಾಲ್ಕು ತಿಂಗಳ ಮಗುವೊಂದು ಒಂದಲ್ಲ, ಎರಡಲ್ಲ, 120 ವಸ್ತುಗಳನ್ನು ಗುರುತಿಸುವ ಮೂಲಕ ವಿಶ್ವ ದಾಖಲೆಯನ್ನು ಸಾಧಿಸಿದೆ. ಮಗುವಿನ ದೃಷ್ಟಿ ಸುಧಾರಿಸಲು ಆಪ್ತ ಸ್ನೇಹಿತರ ಸಲಹೆಯ ಮೇರೆಗೆ ಮಗುವಿನ ತಾಯಿ ಕಪ್ಪು ಮತ್ತು ಬಿಳಿ ಕಾರ್ಡ್‌ಗಳನ್ನು ತೋರಿಸಲು ಪ್ರಾರಂಭಿಸಿದರು. ತನ್ನ ಮಗಳು ಕಾರ್ಡುಗಳನ್ನು ತದೇಕಚಿತ್ತದಿಂದ ನೋಡುತ್ತಿರುವುದನ್ನು ನೋಡಿ ಹೊಸ ಪ್ರಯೋಗ ಮಾಡಲು ಶುರು ಮಾಡಿದರು.
ಎನ್‌ಟಿಆರ್ ಜಿಲ್ಲೆಯ ನಂದಿಗಾಮದ ರಮೇಶ್ ಮತ್ತು ಹೋಮ ದಂಪತಿಯ ಪುತ್ರಿ ಕೈವಲ್ಯ, 4 ತಿಂಗಳ ವಯಸ್ಸಿನಲ್ಲಿ 120 ಬಗೆಯ ಪಕ್ಷಿಗಳು, ತರಕಾರಿಗಳು, ಹಣ್ಣುಗಳು, ಪ್ರಾಣಿಗಳು ಮತ್ತು ಹೂವುಗಳ ಫೋಟೋಗಳನ್ನು ನೆನಪಿಸಿಕೊಳ್ಳುತ್ತದೆ.
ಹುಟ್ಟಿದ ನಾಲ್ಕು ತಿಂಗಳಲ್ಲೇ ಈ ಸಾಧನೆ ಮಾಡಿರುವುದು ತುಂಬಾ ಖುಷಿ ತಂದಿದೆ. ತನ್ನ ಪ್ರಯೋಗ ಫಲ ನೀಡಿದ್ದು, ಮಗು ಚಿಕ್ಕ ವಯಸ್ಸಿನಲ್ಲಿಯೇ ಎಲ್ಲಾ ರೀತಿಯ ಪ್ರಾಣಿಗಳು, ತರಕಾರಿಗಳು ಮತ್ತು ಹಣ್ಣುಗಳನ್ನು ನೆನಪಿಸಿಕೊಳ್ಳುತ್ತದೆ ಎಂದು ಅವರು ಸಂತೋಷ ಎನ್ನುತ್ತಾರೆ ಮಗುವಿನ ಪೋಷಕರು.
ಇದನ್ನು ಗಮನಿಸಿದ ಪೋಷಕರು ಅದನ್ನು ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ಗೆ ಕಳುಹಿಸಿದ್ದಾರೆ. ತನ್ನ ಮಗುವಿನ ಪ್ರತಿಭೆಯನ್ನು ಹೊರತರಬೇಕೆಂದು ನೊಬೆಲ್ ವಿಶ್ವ ದಾಖಲೆಗೆ ಅರ್ಜಿ ಸಲ್ಲಿಸಿದ ನಂತರ ಅವರು ಮಗುವಿನ ವೀಡಿಯೊವನ್ನು ಕಳುಹಿಸಲು ಸೂಚಿಸಿದೆ. ಮಗುವಿನ ಗುರುತಿಸಬಹುದಾದ ಆಟಿಕೆಗಳ ವಿಡಿಯೋಗಳನ್ನು ನೊಬೆಲ್ ವಿಶ್ವ ದಾಖಲೆಗೆ ಕಳುಹಿಸಲಾಗಿದೆ.. ಒಂದು ವಾರದಲ್ಲಿ ಮಗುವಿನ ಪ್ರತಿಭೆಯನ್ನು ಗುರುತಿಸಿ ವಿಶ್ವ ದಾಖಲೆಗಳಿಗೆ ಆಯ್ಕೆ ಮಾಡಲಾಗಿದೆ.