ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ನಾಲ್ವರು ಅಪ್ರಾಪ್ತರ ವಶ

Crime Logo
Published on

ಬೆಂಗಳೂರು: ಕಸ ಹಾಕಲು ಬಂದಿದ್ದ ಯುವತಿ ಜತೆ ಅಸಭ್ಯವಾಗಿ ವರ್ತಿಸಿದ್ದ ನಾಲ್ವರು ಅಪ್ರಾಪ್ತರನ್ನು ಆಡುಗೋಡಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮನೆ ಸಮೀಪ ಕಸ ಹಾಕಲು ಬಂದಿದ್ದ ಯುವತಿ ಜತೆ ನಾಲ್ವರು ಪುಂಡರು ಅಸಭ್ಯವಾಗಿ ವರ್ತಿಸಿದಾಗ ಆಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಆಕೆಯ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ನಾಲ್ವರು ಅಪ್ರಾಪ್ತರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಲ್ಲೆ ಸಹ ಮಾಡಿದ್ದರು:
ಫೆ.೧೮ರ ಮಧ್ಯರಾತ್ರಿ ೨೫ ವರ್ಷದ ಯುವತಿ ಮನೆ ಸಮೀಪ ಕೋರಮಂಗಲ ಆಟೋ ನಿಲ್ದಾಣದ ಬಳಿ ಕಸ ಹಾಕಲು ಸ್ನೇಹಿತನ ಜತೆ ಬಂದಿದ್ದಾರೆ. ನಂತರ ಸ್ನೇಹಿತನ ಜತೆ ಮತಾನಾಡುತ್ತಾ ಮನೆಗೆ ಹೋಗುತ್ತಿದ್ದಾಗ ನಾಲ್ವರು ಪುಂಡರು ಯುವತಿ ಬಳಿ ಬಂದು ಆಕೆಯ ಮೈಮುಟ್ಟಿದ್ದು, ಅದಕ್ಕೆ ಆಕೆ ವಿರೋಧ ವ್ಯಕ್ತಪಡಿಸಿದ್ದಾಗ ಕೈನಿಂದ ಮೂಗಿನಲ್ಲಿ ರಕ್ತ ಬರುವ ಹಾಗೆ ಹಲ್ಲೆ ಮಾಡಿದ್ದಾರೆ. ಈ ವೇಳೆ ಯುವತಿಯ ಜತೆಯಲ್ಲಿದ್ದ ಸ್ನೇಹಿತ ಕೂಡ ವಿರೋಧ ವ್ಯಕ್ತಪಡಿಸಿದಾಗ ಆತನಿಗೆ ಮರದ ಕಟ್ಟಿಗೆಯಿಂದ ಹೊಡೆದಿದ್ದಾರೆ. ಇವರಿಬ್ಬರು ಸಹಾಯಕ್ಕಾಗಿ ಕೂಗಿಕೊಳ್ಳುತ್ತಿದ್ದಂತೆ ಪುಂಡರು ಸ್ಥಳದಿಂದ ಪರಾರಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net