ಭೀಕ್ಷಾಟನೆ ನಡೆಸುತ್ತಿದ್ದ ಮಹಿಳೆ ಸೇರಿ ನಾಲ್ವರು ವಲಸಿಗರ ಸೆರೆ

arrested
Published on

ಬೆಂಗಳೂರು: ನಗರದಲ್ಲಿ ಭೀಕ್ಷಾಟನೆ ನಡೆಸುತ್ತಿದ್ದ ಮಹಿಳೆ ಸೇರಿ ನಾಲ್ವರು ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಸುದ್ದಗುಂಟೆಪಾಳ್ಯ ಪೊಲೀಸರು ಗುರುವಾರ ಬಂಧಿಸಿದ್ದಾರೆ.

ಶಮೀಮ್ ಅಹಮದ್(೫೦), ನೂರ್ ಜಾನ್(೪೦), ಈಕೆಯ ಪತಿ ಅಹ್ಮದ್(೪೪) ಮತ್ತು ಅಬ್ದುಲ್(೪೭) ಬಂಧಿಸಲಾಗಿದೆ. ಈ ಪೈಕಿ ಶಮೀಮ್ ಅಹಮದ್, ೨೦ ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದು, ಕೊಲ್ಕೊತ್ತಾ, ಗುಜರಾತ್‌ನಲ್ಲಿ ವಾಸವಾಗಿದ್ದ. ಐದು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದಾನೆ. ಈ ಮೊದಲು ಪಾದರಾಯನಪುರದಲ್ಲಿ ವಾಸವಾಗಿದ್ದು, ಒಂದೂವರೆ ವರ್ಷಗಳ ಹಿಂದಷ್ಟೇ ಸುದ್ದಗುಂಟೆಪಾಳ್ಯದಲ್ಲಿ ವಾಸವಾಗಿದ್ದಾನೆ. ಇತರೆ ಆರೋಪಿಗಳು ಸಹ ಭಾರತಕ್ಕೆ ಬಂದು ಆರೇಳು ವರ್ಷಗಳು ಆಗಿದ್ದು, ೨-೩ ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದಾರೆ. ಇತ್ತೀಚೆಗೆ ಠಾಣಾ ವ್ಯಾಪ್ತಿಯ ಬಿಸ್ಮಿಲಾನಗರದಲ್ಲಿ ಭೀಕ್ಷಾಟನೆ ನಡೆಸುತ್ತಿದ್ದರು. ಈ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ಎಲ್ಲರೂ ಬಾಂಗ್ಲಾ ವಲಸಿಗರು ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net