ಅಪರಿಚಿತ ಬಂದೂಕುಧಾರಿಗಳ ದಾಳಿಗೆ ನಾಲ್ವರು ಬಲಿ..! | Killed

dk - 2025-06-30T183654.326
Published on

Killed: ಅಪರಿಚಿತ ಬಂದೂಕುಧಾರಿಗಳು 60 ವರ್ಷದ ಮಹಿಳೆ ಸೇರಿ ನಾಲ್ವರನ್ನು ಗುಂಡಿಕ್ಕಿ ಕೊಂದಿರುವ ಘಟನೆ ಮಣಿಪುರದ ಚುರಚಂದಪುರ್​ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊಂಜ್ಜಾಂಗ್​​ ಗ್ರಾಮದ ಬಳಿ ಸಂತ್ರಸ್ತರು ಕಾರಿನಲ್ಲಿ ತೆರಳುತ್ತಿದ್ದಾಗ ಏಕಾಏಕಿಮ ಅಪರಿಚಿತರು ಬಂದೂಕಿನಿಂದ ಗುಂಡಿನ ದಾಳಿ ಮಾಡಿದ್ದಾರೆ. ಸ್ಥಳದಿಂದ ಪರಾರಿಯಾಗಿದ್ದಾರೆ. ಚುರಚಂದಪುರ ಪಟ್ಟಣದಿಂದ ಮೊಂಜ್ಜಾಂಗ್​​ ಗ್ರಾಮ 7 ಕಿ.ಮೀ ದೂರ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರ ಇನ್ನು ಗುರುತು ಧೃಡಪಡಿಸಿಲ್ಲ.

ಈ ದಾಳಿಯ ಹೊಣೆಯನ್ನು ಇದುವರೆಗೆ ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ. ಪೊಲೀಸರು ಮತ್ತು ಹೆಚ್ಚುವರಿ ಭದ್ರತಾ ಪಡೆಗಳನ್ನು ಪ್ರದೇಶಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net