ಚಿನ್ನದಂತ 'ಬಂಗಾರದ' ಮನೆ ನೋಡಿ ನಿಜಕ್ಕೂ ಆಶ್ಚರ್ಯ ಪಡ್ತೀರಾ..!: ಇಲ್ಲಿದೆ ವಿಡಿಯೋ | Golden House

dk - 2025-06-30T172225.437
Published on

Golden House: ನೀವು ಅನೇಕ ಐಶಾರಾಮಿ ಮತ್ತು ಬೃಹತ್​ ಕಟ್ಟಡಗಳನ್ನು ನೋಡಿರ್ತೀರಾ.ಅದರಲ್ಲಿ ಸಾಮಾನ್ಯವಾಗಿ ಕುರ್ಚಿ, ಟೇಬಲ್​, ಸಿಂಕ್​ ಹಾಗೂ ಬಾತ್​ರೂಮ್​ಗಳಲ್ಲಿನ ಕೆಲ ವಸ್ತುಗಳ ಬಂಗಾರದ ಲೇಪನ ಮಾಡಿರುತ್ತದೆ. ಆದರೆ, ಇಲ್ಲಿರುವ ಮನೆ ಎಂದಿಗೂ ನೋಡಿಯೇ ಇರಲ್ಲ. ಮನೆಯಲ್ಲಿನ ಸ್ವೀಚ್​ ಬೋರ್ಡ್​ನಿಂದ ಹಿಡಿದು ಪಿಠೋಪಕರಣಗಳಬರೆಗೆ ಎಲ್ಲ ವಸ್ತುಗಳನ್ನು ಎಲ್ಲವೂ ಶುದ್ಧ ಚಿನ್ನದಂತೆ ಹೊಳೆಯುತ್ತದೆ. ಇದೆಲ್ಲವೂ 24 ಕ್ಯಾರೆಟ್ ಚಿನ್ನದಿಂದ ಮಾಡಲ್ಪಟ್ಟಿದೆ.

ಹೌದು, ಕಟೆಂಟ್​ ಕ್ರಿಯೆಟರ್ ಪ್ರಿಯಂ ಸರಸ್ವತ್ ಎಂಬುವವರು ಇತ್ತೀಚೆಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ಚಿನ್ನದಿಂದ ಅಲಂಕರಿಸಲ್ಪಟ್ಟ ಐಷಾರಾಮಿ ಮನೆಗೆ ಭೇಟಿ ನೀಡಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಅದನ್ನು ಹಂಚಿಕೊಂಡ ನಂತರ ಅದರ ವಿಡಿಯೋ ವೈರಲ್ ಆಗಿದೆ.

ಬಂಗಾರದ ಮನೆ ಹೀಗಿದೆ..

ಕಟ್ಟಡದಲ್ಲಿ ಒಟ್ಟು ಹತ್ತು ಮಲಗುವ ಕೋಣೆಗಳಿವೆ. ಮನೆಯ ಅಂಗಳದಲ್ಲಿರುವ ದನದ ಕೊಟ್ಟಿಗೆಯಿಂದ ಪ್ರಾರಂಭಿಸಿ, ಪ್ರವೇಶದ್ವಾರದಲ್ಲಿ 1936ರ ವಿಂಟೇಜ್ ಮರ್ಸಿಡಿಸ್ ಕಾರಿನಿಂದ ಹಿಡಿದು ವಿವಿಧ ಐಷಾರಾಮಿ ಕಾರುಗಳ ಸಂಗ್ರಹವನ್ನು ಕಾಣಬಹುದು. ಅಷ್ಟೇ ಅಲ್ಲ, ಶ್ರೀಮಂತನ ಯಶಸ್ಸಿನ ಪ್ರಯಾಣವೂ ಸ್ಪೂರ್ತಿದಾಯಕವಾಗಿದೆ. ಅವರ ಕುಟುಂಬದಲ್ಲಿ 20 ಸದಸ್ಯರಿದ್ದು, ಎಲ್ಲರಿಗೂ ಒಂದೇ ಪೆಟ್ರೋಲ್ ಪಂಪ್ ಇತ್ತು ಎಂದು ವಿಡಿಯೋದಲ್ಲಿ ಮನೆಯ ಓನರ್​ ಹೇಳಿದರು.

ಆಗ ಆ ಶ್ರೀಮಂತ ವ್ಯಕ್ತಿ ಕಷ್ಟಪಟ್ಟು ಕೆಲಸ ಮಾಡದಿದ್ದರೆ ತನ್ನ ಉಳಿವು ಪ್ರಶ್ನೆಯಾಗುತ್ತದೆ ಎಂದು ಅರಿತುಕೊಂಡ. ಹಿನ್ನೆಲೆಯಲ್ಲಿ ಅವರು ಸರ್ಕಾರಿ ಗುತ್ತಿಗೆ ವ್ಯವಹಾರಕ್ಕೆ ಇಳಿದರು. ಈ ರೀತಿಯಾಗಿ ಅವರು ಸರ್ಕಾರಿ ರಸ್ತೆಗಳು, ಸೇತುವೆಗಳು ಮತ್ತು ಕಟ್ಟಡಗಳನ್ನು ನಿರ್ಮಿಸುವ ತಮ್ಮ ವ್ಯವಹಾರವನ್ನು ಮತ್ತಷ್ಟು ಅಭಿವೃದ್ಧಿಪಡಿಸಿದರು. ಅಲ್ಲದೆ, ಸುಮಾರು 300 ಕೊಠಡಿಗಳನ್ನು ಹೊಂದಿರುವ ಹೋಟೆಲ್ ಅನ್ನು ಪ್ರಸ್ತುತ ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು.

ಏತನ್ಮಧ್ಯೆ, ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಪ್ರಿಯಾ ಸರಸ್ವತ್ ಅವರು "ಭಾರತದ ಇಂದೋರ್‌ನಲ್ಲಿ ಚಿನ್ನದಿಂದ ಅಲಂಕರಿಸಲ್ಪಟ್ಟ ಮನೆ" ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ. ನೆಟಿಜನ್‌ಗಳು ಐಷಾರಾಮಿ ಮನೆಯ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸಿದರೆ, ಇತರರು ಲಕ್ಷ್ಮಿಯ ಮಗ ಮತ್ತು ಅದ್ಭುತ ವ್ಯಕ್ತಿಯನ್ನು ಹೊಗಳುತ್ತಾ ಪೋಸ್ಟ್ ಮಾಡಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net