ಗುಂಪು ಘರ್ಷಣೆಯಲ್ಲಿ ನಾಲ್ವರಿಗೆ ಗಾಯ

klr clas
ಗಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು.
Published on

ಕೋಲಾರ: ಈದ್ ಮಿಲಾದ್ ಮೆರವಣೆಗೆ ವೇಳೆ ಮುಸ್ಲಿಂ ಸಮುದಾಯದ ಯುವಕರ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿ, ಮಾರಕಾಸ್ತçಗಳಿಂದ ಹಲ್ಲೆ ಮಾಡಿಕೊಂಡಿದ್ದಾರೆ.
ನಗರದ ಕ್ಲಾಕ್ ಟವರ್ ವೃತ್ತದಲ್ಲಿ ಮೆರವಣಿಗೆ ಸಾಗುವಾಗ ಗುಂಪು ಘರ್ಷಣೆಯಾಗಿದೆ. ಇದರಿಂದಾಗಿ ಸೈಯ್ಯದ್ ಸಲ್ಮಾನ್, ಸೈಯದ್ ಸೈ-ï, ಹುಸೇನ್ ಕಾಷಿಪ್, ಕಲೀಲ್ ಅಹ್ಮದ್ ಎಂಬುವರಿಗೆ ಗಾಯಗಳಾಗಿದ್ದು, ನಗರದ ಜಿಲ್ಲಾ ಎಸ್‌ಎನ್‌ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಷಯ ತಿಳಿದ ನಗರಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಜನರನ್ನು ಜದುರಿಸಿದರು. ಕ್ಲಾಕ್ ಟವರ್‌ನಲ್ಲಿ ಎಸ್ಪಿ ನಿಖಿಲ್ ಮೊಕ್ಕಾಂ ಹೂಡಿದ್ದರು. ಪರಿಸ್ಥಿತಿ ತಿಳಿಯಾದ ಬಳಿಕ ಮೆರವಣಿಗೆ ಮುಂದುವರಿಯಿತು. ಘಟನೆಗೆ ಕಾರಣರಾದ ಆರೋಪಿಗಳಿಗಳ ಬಂಧನಕ್ಕೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net