

ಬಿಹಾರ: ಅಂಗಡಿ ಮುಂದೆ ತಮ್ಮ ಕಾರನ್ನು ಅಡ್ಡಲಾಗಿ ನಿಲ್ಲಿಸಿದ್ದವರನ್ನು ಪ್ರಶ್ನಿಸಿದ ಮಾಲೀಕ, ವಾಹನವನ್ನು ಬೇರೆಡೆ ಪಾರ್ಕಿಂಗ್ ಮಾಡಲು ತಿಳಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕಾರಿನಲ್ಲಿದ್ದ ಮೂವರು ಹಾಗೂ ಮಳಿಗೆ ಮಾಲೀಕನ ನಡುವೆ ಜಗಳದಲ್ಲಿ ನಾಲ್ವರು ಹತ್ಯೆಯಾದ ಘಟನೆ ಸದ್ಯ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಈ ಭೀಕರ ಘಟನೆ ಬಿಹಾರ ಔರಂಗಾಬಾದ್ ಜಿಲ್ಲೆಯಲ್ಲಿ ವರದಿಯಾಗಿದೆ.
ಘಟನೆಯ ವಿವರ: ಪಾರ್ಕಿಂಗ್ ವಿಚಾರವಾಗಿ ಕಾರಿನಲ್ಲಿದ್ದ ಮೂವರು ಹಾಗೂ ಮಳಿಗೆ ಮಾಲೀಕನ ವಿರುದ್ಧ ತೀವ್ರ ಮಾತಿನ ಜಟಾಪಟಿ ಭುಗಿಲೆದ್ದಿದೆ. ಮಾತಿನ ತೀವ್ರತೆ ಹಿಂಸಾರಕ್ಕೆ ತಿರುಗಿದ್ದೇ ತಡ, ಕಾರಿನಲ್ಲಿ ಕುಳಿತ್ತಿದ್ದ ವ್ಯಕ್ತಿ ಏಕಾಏಕಿ ಗನ್ ತೆಗೆದು ಅಂಗಡಿ ಮಾಲೀಕನಿಗೆ ಗುಂಡು ಹಾರಿಸಿದ್ದಾರೆ. ಆದ್ರೆ, ಗುರಿ ಓನರ್ಗೆ ತಪ್ಪಿದ್ದು, ಪಕ್ಕದಲ್ಲಿ ಕುಳಿತ್ತಿದ್ದ ವ್ಯಕ್ತಿಗೆ ತಗುಲಿ ಆತ ಸಾವನ್ನಪ್ಪಿದ್ದಾನೆ. ಈ ಘಟನೆಯನ್ನು ಗಮನಿಸುತ್ತಿದ್ದ ಸ್ಥಳೀಯರು ಕುಪಿತಗೊಂಡು ಕಾರಿನಲ್ಲಿದ್ದ ಮೂವರನ್ನು ಹಿಗ್ಗಾಮುಗ್ಗಾ ಥಳಿಸಿ ಹತ್ಯೆಗೈದಿದ್ದಾರೆ.
ಬಿಹಾರ ಜಿಲ್ಲೆಯ ಟೆಟಾರಿಯಾ ಮೋರ್‌ನಲ್ಲಿ ಸ್ಥಳೀಯ ಗ್ರಾಮಸ್ಥನನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಆರೋಪಿಸಿ ಕಾರಿನಲ್ಲಿದ್ದ ಮೂವರನ್ನು ಗುಂಪೊಂದು ಹತ್ಯೆ ಮಾಡಿದೆ. ಘಟನೆಯಲ್ಲಿ ಒಟ್ಟು ನಾಲ್ವರು ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ,(ಏಜೆನ್ಸೀಸ್).