ಪೊಲೀಸರ ಎದುರು ಮಗಳನ್ನೆ ಗುಂಡಿಕ್ಕಿ ಕೊಂದ ತಂದೆ: ಕಾರಣ ಕೇಳಿದ್ರೆ ಶಾಕಿಂಗ್​! | Daughter

dk (16)
Published on

ಮಧ್ಯಪ್ರದೇಶ: ಮದುವೆಗೆ ನಾಲ್ಕು ದಿನ ಬಾಕಿ ಇರುವಾಗಲೇ ಪೊಲೀಸರು ಎದುರು 20ವರ್ಷದ ಮಗಳನ್ನು(Daughter)ತನ್ನ ತಂದೆ ಬಂದೂಕಿನಿಂದ ಗುಂಡಿಟ್ಟು ಕೊಂದ ಘಟನೆ ಎಂದು ಇಲ್ಲಿನ ಗ್ವಾಲಿಯರ್​ನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ತನು ಗುರ್ಜಾರ್​(20) ಮೃತೆ ಎಂದು ಗುರುತಿಸಲಾಗಿದೆ. ಆರೋಪಿ ಮಹೇಶ್ ಗುರ್ಜಾರ್​ ನ್ನು ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟ ಮತ್ತು ಸಹಕರಿಸಿದ ಮತೊಬ್ಬ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಗಳನ್ನು ಕೊಲ್ಲಲು ಕಾರಣ?

ಮಗಳು ತನು ಗುರ್ಜಾರ್​ ಮದುವೆ ನಿರಾಕರಿಸಿದ್ದಾಳೆ. ಮತ್ತೊಬ್ಬರನ್ನು ಪ್ರೀತಿಸಿದ್ದು, ಅತನ್ನನ್ನೇ ಮದುವೆಯಾಗುವುದಾಗಿ ಹೇಳಿದ್ದಳು. ಅಲ್ಲದೆ, ಕುಟುಂಬಸ್ಥರ ಎದುರು ಸಾರ್ವಜನಿಕವಾಗಿ ಮದುವೆ ನಿರಾಕರಿಸಿದ್ದಳು ಎಂದು ಹೇಳಲಾಗಿದೆ. ಈ ಕಾರಣದಿಂದ ಕುಪಿತಗೊಂಡ ತಂದೆ ಮಹೇಶ್​ ಗುರ್ಜಾರ್​ ತನ್ನ ಸಹೋದರ ಸಂಬಂಧಿ ರಾಹುಲ್​ ಜತೆ ಗೂಡಿ ಸ್ವದೇಶಿ ನಿರ್ಮಿತ ಬಂದೂಕಿನಿಂದ ಆಕೆ ಮೇಲೆ ಗುಂಡು ಹಾರಿಸಿದ್ದಾರೆ. ರಾಹುಲ್​ ಹೆಚ್ಚುವರಿಯಾಗಿ ಗುಂಡು ಹಾರಿಸಿದ್ದಾನೆ ಎಂದು ಅಧಿಕಾರಿಳು ತಿಳಿಸಿದ್ದಾರೆ.

ಸಾವಿನ ಮುಂಚೆ ವಿಡಿಯೋ ಆಪ್​ಲೋಡ್​ ಮಾಡಿದ ಯುವತಿ

ಸಾವಿನ ಒಂದು ದಿನದ ಮುಂಚೆ ಅಂದರೆ ರಾತ್ರಿ ಮದುವೆ ನಿರಾಕರಿಸಿದ ಬಗ್ಗೆ ಮತ್ತು ಪೊಲೀಸರು ಇದಕ್ಕೆ ಸಹಕರಿಸುವಂತೆ ಕೋರಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ಕಾರಣದಿಂದ ಮನೆಗೆ ಪೊಲೀಸ್​ ಅಧಿಕಾರಿಗಳ ಧಾವಿಸಿದ್ದರು. ಇದೇ ಸಂದರ್ಭದಲ್ಲಿ ಆರೋಪಿಗಳು ಕೃತ್ಯ ಎಸಗಿದ್ದಾರೆ. ಆರೋಪಿ ಮಹೇಶ್​​ನನ್ನು ಬಂಧಿಸಿದ್ದು ಬಂದೂಕನ್ನು ವಶ ಪಡಿಸಿಕೊಳ್ಳಲಾಗಿದೆ. ಮತ್ತೊಬ್ಬ ಆರೋಪಿ ರಾಹುಲ್​ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net