

ಕಿಯೆವ್/ಮಾಸ್ಕೋ: ರಷ್ಯಾ-ಯೂಕ್ರೇನ್ ನಡುವಿನ ಕದನ ಕ್ಷಣಕ್ಷಣಕ್ಕೂ ತಿರುವು ಪಡೆಯುತ್ತಿದೆ. ಯೂಕ್ರೇನ್ ಮೇಲೆ ಮುಗಿಬಿದ್ದಿರುವ ರಷ್ಯಾ ಕೊಂಚ ಮೇಲುಗೈ ಸಾಧಿಸಿದ್ದರೂ ನ್ಯಾಟೋ ಪಡೆಗಳ ಬೆಂಬಲ, ಮಿತ್ರರಾಷ್ಟ್ರಗಳಿಂದ ಕ್ಷಿಪಣಿಗಳನ್ನು ಪಡೆದು ಶಕ್ತಿ ವೃದ್ಧಿಸಿಕೊಂಡಿರುವ ಯೂಕ್ರೇನ್ ಕೂಡ ತಿರುಗಿಬಿದ್ದಿದೆ.
ರಷ್ಯಾ ಸೇನೆ ಕೈವಶ ಮಾಡಿಕೊಂಡಿದ್ದ ರ್ಖಾವ್ ಪಟ್ಟಣವನ್ನು ಯೂಕ್ರೇನ್ ಮರುವಶಕ್ಕೆ ಪಡೆದಿದ್ದು, ರಷ್ಯಾ ಯೋಧರನ್ನೇ ಸೆರೆ ಹಿಡಿದಿದೆ. ಈ ಎಲ್ಲ ಬೆಳವಣಿಗೆ ನಡುವೆಯೇ ರಷ್ಯಾ ಮುಂದಿಟ್ಟಿರುವ ಶಾಂತಿ ಮಾತುಕತೆ ಪ್ರಸ್ತಾಪಕ್ಕೆ ಯೂಕ್ರೇನ್ ಸಹಮತ ವ್ಯಕ್ತಪಡಿಸಿದ್ದು, ಆ ದೇಶದ ನಿಯೋಗ ಬೆಲಾರಸ್ ಗಡಿಯತ್ತ ತೆರಳಿದೆ. ಉಭಯ ದೇಶಗಳ ಮಾತುಕತೆ ಫಲಪ್ರದವಾದಲ್ಲಿ ಕದನಕ್ಕೆ ವಿರಾಮ ಬೀಳಲಿದೆ.