ತೆಲಂಗಾಣ: ಬಿಆರ್​ಎಸ್​ ತೊರೆದು ಕಾಂಗ್ರೆಸ್​ ಸೇರಿದ ಶಾಸಕ​ ಪೊಚರಂ ಶ್ರೀನಿವಾಸ್ ರೆಡ್ಡಿ!

reca
Published on

ತೆಲಂಗಾಣ: ತೆಲಂಗಾಣ ವಿಧಾನಸಭೆ ಮಾಜಿ ಸ್ಪೀಕರ್​, ಭಾನ್ಸವಾಡಾ ಕ್ಷೇತ್ರದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಶಾಸಕ ಪೊಚರಂ ಶ್ರೀನಿವಾಸ್ ರೆಡ್ಡಿ ಅವರು ಕಾಂಗ್ರೆಸ್​ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಮುಖ್ಯಮಂತ್ರಿ ಎ.ರೇವಂತ್ ರೆಡ್ಡಿ, ಕೃಷಿ ಸಚಿವ ಶ್ರೀನಿವಾಸ ರೆಡ್ಡಿ ಅವರು ಶಾಸಕರ ಮನೆಗೆ ಭೇಟಿ ನೀಡಿ ಕಾಂಗ್ರೆಸ್​ ಸೇರುವಂತೆ ಆಹ್ವಾನಿಸಿದರು.

ಪೊಚರಂ ಶ್ರೀನಿವಾಸರೆಡ್ಡಿ ಅವರು ಕಾಂಗ್ರೆಸ್​ ಸೇರುತ್ತಿರುವ ಬಿಆರ್​ಎಸ್​ ಪಕ್ಷದ ನಾಲ್ಕನೇ ಶಾಸಕ ಈ ಮೊದಲು ತೆಲ್ಲಂ ವೆಂಕಟರಾವ್, ದಾನಂ ನಾಗೇಂದರ್​ ಮತ್ತು ಕಡಿಯಂ ಶ್ರೀಹರಿ ಅವರು ಲೋಕಸಭೆ ಚುನಾವಣೆಗೆ ಮುನ್ನವೇ ಕಾಂಗ್ರೆಸ್​ ಸೇರ್ಪಡೆಯಾಗಿದ್ದರು.

ಪೊಚರಂ ಶ್ರೀನಿವಾಸ ರೆಡ್ಡಿ ಅವರನ್ನು ರಾಜ್ಯ ನಿರ್ಮಾಣಕ್ಕೆ ಬೆಂಬಲಿಸಲು ಕೋರಿದೆ. ಅವರು ರಾಜ್ಯದ ಕಲ್ಯಾಣಕ್ಕಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ರೈತರ ಕಲ್ಯಾಣ ಕಾರ್ಯಕ್ರಮಗಳಿಗೆ ಸರ್ಕಾರ ಅವರ ಸಲಹೆ ಸ್ವೀಕರಿಸಲಿದೆ ಎಂದು ಸಿಎಂ ರೇವಂತ್​ ರೆಡ್ಡಿ ಹೇಳಿದ್ದಾರೆ.

ಈ ವೇಳೆ ಮಾತನಾಡಿದ ಬಿಆರ್​ಎಸ್​ ಶಾಸಕ ಪೊಚರಂ ಶ್ರೀನಿವಾಸರೆಡ್ಡಿ ಅವರು, ಸಿಎಂ ರೇವಂತ್ ರೆಡ್ಡಿ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೇನೆ. ಅವರ ರೈತ ಪರ ನೀತಿ ಶ್ಲಾಘನೀಯ. ನಾನು ಕೂಡ ರೈತರ ಕುಟುಂಬದಿಂದ ಬಂದಿರುವ ಕಾರಣ ಮತ್ತು ಸರ್ಕಾರದ ಬದ್ಧತೆಯನ್ನು ಅರಿತು ಕಾಂಗ್ರೆಸ್ ಸೇರಲು ನಿರ್ಧರಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net