

ನವದೆಹಲಿ: ಭಾರತದ ಮೋಸ್ಟ್ ವಾಂಟೆಡ್ ಉಗ್ರ, ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜಾರ್‌ನ ಹತ್ಯೆಗೈದು ಒಂದು ವರ್ಷವಾದ ಹಿನ್ನೆಲೆಯಲ್ಲಿ ಒಂದು ನಿಮಿಷ ಮೌನ ಆಚರಣೆ ಮಾಡಿ ಆತನಿಗೆ ಗೌರವ ಸಲ್ಲಿಸಿದ ಕೆನಡಾ ಸಂಸತ್ತು ನಡೆಯನ್ನು ಭಾರತ ಶುಕ್ರವಾರ ಖಂಡಿಸಿದೆ.
ಉಗ್ರವಾದಕ್ಕೆ ರಾಜಕೀಯ ನೆಲೆಯನ್ನು ಕಲ್ಪಿಸುವುದು ಹಾಗೂ ಹಿಂಸಾಚಾರಕ್ಕೆ ಕುಮ್ಮಕ್ಕ ನೀಡುವ ಯಾವುದೇ ರೀತಿಯ ನಡೆಗಳನ್ನು ನಾವು ಸ್ವಾಭಾವಿಕವಾಗಿ ವಿರೋಧಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ. ಅಸಾಧಾರಣ ನಡೆ ಎಂಬಂತೆ ನಿಜ್ಜರ್ ಸ್ಮರಣಾರ್ಥ ಕೆನಡಾದ ಸಂಸತ್ತು ಎರಡು ದಿನಗಳ ಹಿಂದೆ "ಒಂದು ನಿಮಿಷ ಮೌನ" ಆಚರಿಸಲಾಗಿತ್ತು.
ಕಳೆದ ವರ್ಷ ಜೂನ್ 18ರಂದು ಕೆನಡಾದ ಸುರ‍್ರೆ ನಗರದಲ್ಲಿ ಹರ್ದೀಪ್ ಸಿಂಗ್ ನಿಜ್ಜಾರ್ ಅಪರಿಚಿತರ ಗುಂಡಿಗೆ ಬಲಿಯಾಗಿದ್ದ. ಈ ಘಟನೆ ನಡೆದು ಒಂದು ವರ್ಷವಾದ ಹಿನ್ನೆಲೆಯಲ್ಲಿ ಕೆನಡಾ ಸಂಸತ್ತು ಎದ್ದು ನಿಂತು, ಮೌನ ಆಚರಿಸಿದೆ.
ಉಗ್ರ ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರ ಕೈವಾಡ ಇರುವ ಶಂಕೆ ಇದೆ ಎಂದು ಕೆನಡಾ ಜಸ್ಟಿನ್ ಟ್ರಡೊ ಆರೋಪಿಸಿದ್ದರು. ಈ ಆರೋಪಗನ್ನು ವಿರೋಧಿಸಿದ ಭಾರತ ಇದು ಅಸಂಬದ್ಧ ಹೇಳಿಕೆ ಎಂದು ತಿರುಗೇಟು ನೀಡಿತ್ತು.