ಪಂಜಾಬ್​ ಮಾಜಿ ಸಿಎಂ ಪ್ರಕಾಶ್​ ಸಿಂಗ್​ ಬಾದಲ್​ ನಿಧನ

prakash singh badal
Published on

ಮೊಹಾಲಿ ಪಂಜಾಬ್​ನ ಮಾಜಿ ಸಿಎಂ, ಶಿರೋಮಣಿ ಅಕಾಲಿದಳ ಪಕ್ಷದ ಮುಖ್ಯಸ್ಥರು ಪ್ರಕಾಶ್​ ಸಿಂಗ್​ ಬಾದಲ್​(95) ವಿಧಿವಶರಾಗಿದ್ದಾರೆ.

ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಮೊಹಾಲಿಯ ಪೋರ್ಟಿಸ್​ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ದಾಖಲಿಸಲಾಗಿತ್ತು.

ಉಸಿರಾಟದ ಸಮಸ್ಯೆ ಇಂದ ಬಳಲುತ್ತಿದ್ದ ಅವರನ್ನು ವೈದ್ಯರು ತೀವವರ ನಿಘಾ ಘಟಕ(ICU)ನಲ್ಲಿ ಇರಿಸಿ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಸಂಜೆ ಸುಮಾರು 8 ಘಂಟೆಗೆ ಅವರು ನಿಧನರಾಗಿದ್ದಾರೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

ಪ್ರಕಾಶ್​ ಸಿಂಗ್​ ಬಾದಲ್​ ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net