

ಇಸ್ಲಮಾಬಾದ್: ಮಾಜಿ ಬ್ಲೂಫಿಲಂ ಸ್ಟಾರ್ ಮಿಯಾ ಖಲೀಫ್ ಭಾರತೀಯ ಮುಸ್ಲಿಂ ಎಂದು ಭಾವಿಸಿ ಟ್ವೀಟ್ ಮಾಡುವ ಮೂಲಕ ಪಾಕಿಸ್ತಾನ ಮಾಜಿ ಸಚಿವರೊಬ್ಬರು ಭಾರಿ ಟ್ರೋಲ್ಗೆ ಗುರಿಯಾಗಿದ್ದಾರೆ.
ಸೋಮವಾರ ಟ್ವಿಟರ್ ಬಳಕೆದಾರರೊಬ್ಬರು ಮಿಯಾ ಖಲೀಫ್ ಫೋಟೋ ಪೋಸ್ಟ್ ಮಾಡಿ, ಇವರು ಭಾರತದ ಪ್ರಾದೇಶಿಕ ಸಿನಿಮಾ ಕ್ಷೇತ್ರದ ಪ್ರಭಾವಿ ನಟಿಯಾಗಿದ್ದಾರೆ. ಹಿಜಬ್ ಧರಿಸಿ, ಸಿಎಎ ವಿರೋಧಿಸುವ ಮೂಲಕ ಭಾರತೀಯ ಮುಸ್ಲಿಂರೊಂದಿಗೆ ಐಕ್ಯತೆ ಮೂಡಿಸಿದ್ದಾರೆ. ಅವರಿಗೆ ನಮಸ್ಕರಿಸಿ, ಮೋದಿ ಅವರು ಶೀಘ್ರವೇ ರಾಜೀನಾಮೆ ನೀಡಲಿದ್ದಾರೆ ಎಂದು ರೆಹಮಾನ್ ಮಲಿಕ್ಗೆ ಟ್ವೀಟ್ ಮಾಡಿದ್ದರು.
ಆದರೆ, ಜವಾಬ್ದಾರಿಯು ಸ್ಥಾನದಲ್ಲಿರುವ ಮಲಿಕ್ ಟ್ವೀಟ್ ಬಗ್ಗೆ ತಿಳಿದುಕೊಳ್ಳುವ ಗೋಜಿಗೆ ಹೋಗದೇ ಮಿಯಾ ಖಲೀಫ್ರನ್ನು ಭಾರತೀಯ ಮುಸ್ಲಿಂ ಎಂದು ಭಾವಿಸಿ ಅವಳಿಗೆ ದೇವರು ಆಶೀರ್ವಾದ ಮಾಡಲಿ ಎಂದು ಟ್ವೀಟ್ ಮಾಡುವ ಮೂಲಕ ಪೇಚಿಗೆ ಸಿಲುಕಿದ್ದಾರೆ. ರೆಹಮಾನ್ ಟ್ವೀಟ್ ಟ್ರೋಲ್ಗೆ ಗುರಿಯಾಗುತ್ತಿದ್ದಂತೆ ಡಿಲೀಟ್ ಮಾಡಿದ್ದಾರೆ.
ಅಂದಹಾಗೆ ಮಿಯಾ ಖಲೀಫ್ ಬ್ಲೂಫಿಲಂ ಸ್ಟಾರ್ ಆಗಿದ್ದು, ಅಮೆರಿಕ ಮೂಲದವರು. (ಏಜೆನ್ಸೀಸ್)