Mukul Dev : ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ನಟ ಮುಕುಲ್ ದೇವ್ ಅವರು ಶುಕ್ರವಾರ ನಿಧನರಾದರು.
54 ವರ್ಷದ ಮುಕುಲ್ ದೇವ್ ಆರೋಗ್ಯ ಹದಗೆಟ್ಟ ನಂತರ, ಅವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ಸ್ಥಳಾಂತರಿಸಲಾಯಿತು, ಅಲ್ಲಿ ಅವರಿಗೆ ಚಿಕಿತ್ಸೆ ನೀಡಲಾಯಿತು. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ದೆಹಲಿಯ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ನಿಧನರಾದರು ಎಂದು ತಿಳಿದುಬಂದಿದೆ.
1970ರ ಸೆಪ್ಟೆಂಬರ್ 17ರಂದು ದೆಹಲಿಯಲ್ಲಿ ಅವರು ಜನಿಸಿದರು. ಮುಕುಲ್ ದೇವ್ 1996ದ ‘ದಸ್ತಕ್’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿದರು.
ನಟ ಉಪೇಂದ್ರ ಅಭಿನಯದ 'ರಜಿನಿ' ಚಿತ್ರದಲ್ಲಿ ವಿಲನ್ ಪಾತ್ರ ನಿರ್ವಹಿಸಿದ್ದ ಮುಕುಲ್ ದೇವ್. ಈ ಚಿತ್ರದಲ್ಲಿ ಅವರು ವಿಲನ್ ಪಾತ್ರ ಮಾಡಿದ್ದರು. 2016ರಲ್ಲಿ ಕನ್ನಡದಲ್ಲಿ ರಿಲೀಸ್ ಆದ ‘ನಾಗರಹಾವು’ ಸಿನಿಮಾ ಮಾಡಿದರು. ಅವರು ಹಿಂದಿ, ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲೂ ಕಾಣಿಸಿಕೊಂಡಿದ್ದರು. ಧಾರಾವಾಹಿ ಹಾಗೂ ವೆಬ್ ಸೀರಿಸ್ಗಳಲ್ಲೂ ಅವರು ಕಾಣಿಸಿಕೊಂಡಿದ್ದಾರೆ.