ಮಾಜಿ ಶಾಸಕನ ವಶಕ್ಕೆ ಪಡೆದು ವಿಚಾರಣೆ

Crime Logo
Published on

ಬೆಂಗಳೂರು: ವಿವಾಹ ಮಾಡಿಕೊಳ್ಳುವುದಾಗಿ ನಂಬಿಸಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ವಂಚಿಸಿದ ಆರೋಪ ಸಂಬಂಧ ಉತ್ತರ ಪ್ರದೇಶದ ಮಾಜಿ ಶಾಸಕನನ್ನು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉತ್ತರಪ್ರದೇಶದ ೪೦ ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಮಾಜಿ ಶಾಸಕ ಶ್ರೀಭಗವಾನ್ ಶರ್ಮಾ(೫೧)ನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿಯ ವಿರುದ್ಧ ವಿರುದ್ಧ ಬಿಎನ್‌ಎಸ್-೬೯ ಅಡಿ ಸುಳ್ಳು ಭರವಸೆ ನೀಡಿ ಲೈಂಗಿಕ ಸಂಪರ್ಕ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಬಳಿಕ ಆರೋಪಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ನಡೆಸಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶ್ರೀಭಗವಾನ್ ಶರ್ಮಾ ಮತ್ತು ದೂರುದಾರ ಮಹಿಳೆ ಉತ್ತರ ಪ್ರದೇಶ ಮೂಲದವರಾಗಿದ್ದಾರೆ. ಇಬ್ಬರು ಆತ್ಮೀಯರಾಗಿದ್ದು, ಆ.೧೪ರಂದು ಮಹಿಳೆ ಮತ್ತು ಆಕೆಯ ಪುತ್ರನ ಜತೆ ರಾಜ್ಯ ಪ್ರವಾಸಕ್ಕೆ ಬಂದ ಶ್ರೀಭಗವಾನ್ ಶರ್ಮಾ ಬೆಂಗಳೂರಿನ ವಿವಿಧೆಡೆ ಮತ್ತು ಚಿತ್ರದುರ್ಗದಲ್ಲಿ ಸುತ್ತಾಡಿದ್ದರು. ಬಳಿಕ ಏರ್‌ಪೋರ್ಟ್ ಸಮೀಪದ ಪ್ರತಿಷ್ಠಿತ ಖಾಸಗಿ ಹೋಟೆಲ್‌ನಲ್ಲಿ ಆ.೧೭ರಂದು ತಂಗಿದ್ದು, ಈ ವೇಳೆ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳುವುದಾಗಿ ಹೇಳಿ ಲೈಂಗಿಕ ದೌರ್ಜನ್ಯ ಎಸಗಿದ್ದ. ಇದಕ್ಕೆ ಮಹಿಳೆ ವಿರೋಧಿಸಿದ್ದಾಗ ಪ್ರಾಣ ಬೆದರಿಕೆ ಹಾಕಿ ಪರಾರಿಯಾಗಿದ್ದ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net