

ಗದಗ: ಮಾಜಿ ಶಾಸಕ ಶಂಕರಗೌಡ ಎನ್.ಪಾಟೀಲ(81) ಅವರು ಗುರುವಾರ ಬೆಳಗಿನ ಜಾವ ವಿಧಿವಶವಾದರು. ಇಂದು ಸಂಜೆ 4ಕ್ಕೆ ಸ್ವಗ್ರಾಮ ಪುಟಗಾಂವ್ ಬಡ್ನಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
1989-1994ರ ಅವಧಿಯಲ್ಲಿ ಶಂಕರಗೌಡ ಎನ್.ಪಾಟೀಲ ಅವರು ಶಿರಹಟ್ಟಿ ಕ್ಷೇತ್ರದ ಶಾಸಕರಾಗಿದ್ದರು. ಸರಳ ನಡೆ, ನುಡಿ ನೇರ, ನಿಷ್ಠುರ ವ್ಯಕ್ತಿತ್ವ ಹೊಂದಿದ್ದ ಎಸ್.ಎನ್. ಪಾಟೀಲ್ ಅವರು ಎಲ್ಲ ಪಕ್ಷಗಳ ನಾಯಕರ ಜೊತೆ ಅನೋನ್ಯವಾಗಿದ್ದರು. ಅವರಿಗೆ ಪತ್ನಿ ಹಾಗೂ ಇಬ್ಬರು ಪುತ್ರ ಇದ್ದಾರೆ. ಪಾಟೀಲ್ರ ಅಗಲಿಕೆ ಸುದ್ದಿ ಕೇಳಿ ಅಭಿಮಾನಿ ವರ್ಗ ಕಂಬನಿ ಮಿಡಿದಿದೆ.