ಬಿ.ಎಸ್.ಯಡಿಯೂರಪ್ಪನವರನ್ನು ಗುಣಗಾನ ಮಾಡಿದ ಮುನಿಯಪ್ಪ

Muniyappa 10 Feb 20
Published on

ಶಿವಮೊಗ್ಗ: ರೈಲ್ವೆ ಯೋಜನೆಗಳಿಗೆ ಉಚಿತ ಭೂಮಿ, ಅರ್ಧದಷ್ಟು ಅನುದಾನ ನೀಡಿದ ದೇಶದ ಏಕೈಕ ಸಿಎಂ ಯಡಿಯೂರಪ್ಪ. ನಾನು ರೈಲ್ವೆ ಖಾತೆ ರಾಜ್ಯ ಸಚಿವನಾಗಿದ್ದಾಗ ಅವರು ನನ್ನೊಂದಿಗೆ ವ್ಯವಹರಿಸಿದ ರೀತಿ ಅನುಕರಣೀಯ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದಲ್ಲಿ ಮಾದಿಗ ದಂಡೋರ ಸಮಿತಿ ಏರ್ಪಡಿಸಿದ್ದ ಮಾದಾರ ಚನ್ನಯ್ಯ ಜಯಂತಿ ಹಾಗೂ ಮಾದಿಗ ಆಪ್ ಬಿಡುಗಡೆ ಸಮಾರಂಭದಲ್ಲಿ ಬಿಎಸ್​ವೈ ಹಾಗೂ ಬಿಜೆಪಿಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು.

ಸದಾಶಿವ ಆಯೋಗದ ವರದಿ ಜಾರಿಗೆ ನಾವೆಲ್ಲ ಬಹಳ ಪ್ರಯತ್ನ ಮಾಡಿದ್ದೇವೆ. ನಮ್ಮಿಂದ ಆಗಲಿಲ್ಲ. ಅದನ್ನು ಜಾರಿಗೆ ತರುವ ಶಕ್ತಿ ಯಡಿಯೂರಪ್ಪ ಅವರಿಗಿದೆ. ಅವರನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದರು. ಸಮುದಾಯಕ್ಕೆ ಸೇರಿದ ಗೋವಿಂದ ಕಾರಜೋಳಗೆ ಬಿಜೆಪಿ ಡಿಸಿಎಂ ಸ್ಥಾನಮಾನ ನೀಡಿದೆ. 70 ವರ್ಷಗಳಲ್ಲಿ ಇದು ಇತಿಹಾಸ. ನಮ್ಮ ಸಮುದಾಯದ ಮೇಲೆ ಬಿಎಸ್​ವೈಗೆ ಎಷ್ಟು ಪ್ರೀತಿ ಇದೆ ಎಂಬುದಕ್ಕೆ ಇದು ನಿದರ್ಶನ ಎಂದು ಕೊಂಡಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net