

ಬಾಗಲಕೋಟೆ: ಸುಭದ್ರ ಸರ್ಕಾರಕ್ಕೆ ಅಭದ್ರತೆ ಯಾಕೆ ಕಾಡಬೇಕು? ಸರ್ಕಾರವನ್ನು ಅಲಗಾಡಿಸುವ ಪಾಪದ ಕೆಲಸಕ್ಕೆ ಕೈಹಾಕಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಸಚಿವ ಗೋವಿಂದ ಕಾರಜೋಳ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಸ್ವ-ಸಹಾಯ ಸಂಘಗಳಿಂದ ತಯಾರಿಸಿದ ವಸ್ತುಗಳ ಪ್ರದರ್ಶನ
ಇಂದು ಬಾಗಲಕೋಟೆಯಲ್ಲಿ ಬಿಜೆಪಿಯವರು ಸರ್ಕಾರ ಅಲಗಾಡಿಸುವ ಕೆಲಸ ಮಾಡ್ತಿದ್ದಾರೆ ಎನ್ನುವ ಆರೋಪಕ್ಕೆ ಪ್ರತಿಕ್ರಿಯಿಸಿದ ಗೋವಿಂದ ಕಾರಜೋಳ, "ಕಾಂಗ್ರೆಸ್ನಲ್ಕೇ ಶಾಸಕರು ಬಂಡಾಯ ಎದ್ದಿದ್ದಾರೆ. ಯಾವುದೇ ಅಡತಡೆ, ಅಡಚಣೆ ಇಲ್ಲದೇ 5 ವರ್ಷ, ಜನರಿಗೆ ಕೊಟ್ಟ ಭರವಸೆಗಳನ್ನು ಅವರು ಈಡೇರಿಸಬೇಕು. ನಾವು ಸರ್ಕಾರವನ್ನು ಅಲುಗಾಡಿಸುವ ಕೆಲಸ ಮಾಡಲ್ಲ. ಆ ಪಾಪದ ಕೆಲಸಕ್ಕೆ ನಾವು ಕೈ ಹಾಕುವುದಿಲ್ಲ" ಎಂದರು.
ಅವರಲ್ಲೇ ಗುಂಪುಗಳಾಗಿವೆ. ಡಿಕೆಶಿ, ಮುನಿಯಪ್ಪ, ಪರಮೇಶ್ವರ, ಸಿದ್ದರಾಮಯ್ಯ ಅವರದ್ದು ಒಂದು ಗುಂಪು ಎಂದರು. ಇನ್ನು ಸಚಿವ ತಿಮ್ಮಾಪುರ್ಗೆ ಪರೋಕ್ಷ ಟಾಂಗ್ ಕೊಟ್ಟ ಗೋವಿಂದ ಕಾರಜೋಳ, "ಸಿಎಂ ಸ್ಥಾನಕ್ಕೆ ಹಣಿಕೆ ಹಾಕಿದ್ರು ಅಂತಾ ಹೇಳಿದರು. ಅವರು (ತಿಮ್ಮಾಪುರ) ಮುಖ್ಯಮಂತ್ರಿಯಾಗಬೇಕು. 50 ವರ್ಷದ ನಂತರ ನಮ್ಮ ಜಿಲ್ಲೆಗೆ ಅವಕಾಶ ಸಿಕ್ಕಂತಾಗುತ್ತದೆ" ಎಂದು ಲೇವಡಿ ಮಾಡಿದರು.
ಬಿಜೆಪಿಯಿಂದ ಕಾಂಗ್ರೆಸ್ ನಾಯಕರನ್ನು ಸೆಳೆಯವ ವಿಚಾರಕ್ಕೆ ಸ್ಪಂದಿಸಿದ ಅವರು, "31 ಜನ ಶಾಸಕರು ಸಿದ್ದರಾಮಯ್ಯ ಬಗ್ಗೆ ಬಂಡಾಯ ಎದ್ದಿದ್ದಾರೆ. ಹಾಲು ಕುಡಿದು ಸಾಯುವವರಿಗೆ, ವಿಷ ಹಾಕಿ ಸಾಯಿಸುವುದಿಲ್ಲ" ಎಂದರು. ಇನ್ನು ಸರ್ಕಾರ ಪತನವಾಗುತ್ತಾ? ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ, ಕಾಯ್ದು ನೋಡಿ ಎಂದು ನಸುನಕ್ಕು ಸ್ಥಳದಿಂದ ತೆರಳಿದರು.