ಅಲ್ವಿದಾ! ರಾಜಕೀಯಕ್ಕೆ ಗುಡ್​ಬೈ ಹೇಳಿದ ಮಾಜಿ ಸಚಿವ ಬಾಬುಲ್ ಸುಪ್ರಿಯೊ!

babul
Published on

ನವದೆಹಲಿ : ಮಾಜಿ ಕೇಂದ್ರ ಸಚಿವ ಹಾಗೂ ಬಿಜೆಪಿ ಸಂಸದ ಬಾಬುಲ್ ಸುಪ್ರಿಯೋ ಅವರು ರಾಜಕೀಯ ತೊರೆಯುವ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು ಘೋಷಿಸಿದ್ದಾರೆ. ಇಂದು ತಮ್ಮ ಫೇಸ್​ಬುಕ್​ ಖಾತೆಯಲ್ಲಿ 'ಅಲ್ವಿದಾ' ಹೇಳಿರುವ ಸುಪ್ರಿಯೊ, ತಮ್ಮ ಲೋಕಸಭಾ ಸದಸ್ಯತ್ವಕ್ಕೆ ರಾಜಿನಾಮೆ ಕೊಡುವುದಾಗಿ ಬರೆದಿದ್ದಾರೆ.

ಬಂಗಾಳಿಯಲ್ಲಿ ಕಾವ್ಯಮಯವಾಗಿ ಬರೆದಿರುವ ಸುದೀರ್ಘ ಸಂದೇಶದಲ್ಲಿ ಕಲಾವಿದರೂ ಆಗಿರುವ ಸುಪ್ರಿಯೋ, "ಸಾಮಾಜಿಕ ಕಾರ್ಯ ಮಾಡುವುದಕ್ಕೆ ರಾಜಕೀಯದಲ್ಲಿರುವ ಅಗತ್ಯವಿಲ್ಲ" ಎಂದಿದ್ದಾರೆ. ಇತ್ತೀಚೆಗೆ, ಸಂಪುಟ ಪುನರ್​ರಚನೆಯಾದಾಗ ಮಂತ್ರಿಗಿರಿ ಕಳೆದುಕೊಂಡ ಸುಪ್ರಿಯೊ, ತಮಗೆ ಯಾವುದೋ ಸ್ಥಾನ ಬೇಕು ಎಂದು ಈ ರೀತಿ ಮಾಡುತ್ತಿಲ್ಲ, ತಪ್ಪು ತಿಳಿದುಕೊಳ್ಳಬೇಡಿ ಎಂದಿದ್ದಾರೆ.

ರಾಜಕೀಯ ತೊರೆಯಬೇಕು ಎಂದು ಕಳೆದ ಕೆಲವು ದಿನಗಳಲ್ಲಿ ತೀರ್ಮಾನಿಸಿದ್ದೇನೆ. ನನಗೆ ಹಲವು ರೀತಿಯಲ್ಲಿ ಪ್ರೇರಣೆಯಾಗಿರುವ ಅಮಿತ್​ ಷಾ ಮತ್ತು ನಡ್ಡಾ ಅವರಿಗೆ ಧನ್ಯವಾದಗಳು ಎಂದು ಸುಪ್ರಿಯೋ ಹೇಳಿದ್ದಾರೆ. ಈ ಪೋಸ್ಟ್​ನಲ್ಲಿ 2014ರ ಮತ್ತು 2019ರ ತಮ್ಮ ಚುನಾವಣೆಯ ಸಂದರ್ಭ, ಬಂಗಾಳದಲ್ಲಿ ಬಿಜೆಪಿ ಸೋಲಿನ ಪರಿಸ್ಥಿತಿಯ ಬಗ್ಗೆ ಕೂಡ ಉಲ್ಲೇಖಿಸಿದ್ದಾರೆ. ಜೊತೆಗೆ ತಮ್ಮ ಕ್ಷೇತ್ರವಾದ ಬಂಗಾಳದ ಅಸನ್ಸೊಲ್ ಜನತೆಗೆ ಧನ್ಯವಾದ ಸೂಚಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net