ಸೆಮಿಫೈನಲ್ಸ್​ನಲ್ಲಿ ಸಿಂಧುಗೆ ಸೋಲು ...ಆದರೆ ಪದಕದ ಆಸೆ ಜೀವಂತ!

sindhup
Published on

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್​ನಲ್ಲಿ ಇಂದು ನಡೆದ ಮಹಿಳೆಯರ ಬ್ಯಾಡ್ಮಿಂಟನ್ ಸೆಮಿಫೈನಲ್ಸ್ ಪಂದ್ಯದಲ್ಲಿ ಭಾರತದ ಚ್ಯಾಂಪಿಯನ್ ಪಿ.ವಿ.ಸಿಂಧು, ಚೀನಾದ ಟೈ ಟ್ಸು ಯಿಂಗ್ ವಿರುದ್ಧ ಪರಾಜಯ ಅನುಭವಿಸಿದ್ದಾರೆ.

ಆದರೆ, ಭಾರತದ ಪದಕದ ಆಸೆ ಇನ್ನೂ ಬತ್ತಿಲ್ಲ. ಏಕೆಂದರೆ, ಮತ್ತೊಂದು ಸೆಮಿಫೈನಲ್ಸ್​ನಲ್ಲಿ ಸೋತ ಆಟಗಾರ್ತಿ ಹೆ ಬಿಂಗ್ ಜಿಯಾವೊ ವಿರುದ್ಧ, ನಾಳೆ ಕಂಚಿನ ಪದಕಕ್ಕಾಗಿ ಸೆಣೆಸಲಿದ್ದಾರೆ.

ಸರಣಿ ಜಯ ಸಾಧಿಸಿ ಸೆಮಿಫೈನಲ್ಸ್ ತಲುಪಿದ್ದ ಸಿಂಧು, ಒಲಿಂಪಿಕ್ಸ್​ನಲ್ಲಿ ಮೊದಲ ರಾಂಕ್​ ಹೊಂದಿದ ಚೀನಾದ ಟೈ ಟ್ಸು ಯಿಂಗ್ ವಿರುದ್ಧ ಕಠಿಣ ಸೆಣಸಾಟ ನಡೆಸಿದರು. ಮೊದಲ ಗೇಮ್​ 18-21 ಸ್ಕೋರ್​ನೊಂದಿಗೆ ಸೋಲು ತಂದರೆ, ಎರಡನೇ ಗೇಮ್​ ಕೂಡ 12-21 ರ ಸೋಲು ತಂದಿತು. ಈ ಪಂದ್ಯ 40 ನಿಮಿಷಗಳ ಕಾಲ ನಡೆಯಿತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net