ಕೇಜ್ರಿವಾಲ್ ಸಮ್ಮುಖದಲ್ಲಿ ಆಪ್ ಪಕ್ಷಕ್ಕೆ​ ಸೇರ್ಪಡೆಯಾದ ಮಾಜಿ ಐಪಿಎಸ್​ ಅಧಿಕಾರಿ ಭಾಸ್ಕರ್ ರಾವ್

roa pic
Published on

ದೆಹಲಿ: ನಿವೃತ್ತ ಐಪಿಎಸ್​ ಅಧಿಕಾರಿ ಭಾಸ್ಕರ್ ರಾವ್ ಇಂದು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ. ದೆಹಲಿ ಮುಖ್ಯಮಂತ್ರಿ ಹಾಗೂ ಎಎಪಿ ನಾಯಕ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆ.

ಪಕ್ಷದ ಚಿಹ್ನೆ ಹೊಂದಿರುವ ಶಾಲು ಧರಿಸಿ, ಆಪ್ ಎಂಬ ಗಾಂಧಿ ಟೋಪಿ ಧರಿಸಿ ಭಾಸ್ಕರ್ ರಾವ್ ಆಮ್ ಆದ್ಮಿ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ದೆಹಲಿಯ ಕಛೇರಿಯಲ್ಲಿ ಭಾಸ್ಕರ್ ರಾವ್ ಜತೆ ದಿಲೀಪ್ ಪಾಂಡೆ, ಪೃಥ್ವಿ ರೆಡ್ಡಿ, ಸಂಚಿತ್ ಸ್ವಾನೆ, ಅರವಿಂದ್, ವಿಜಯ್ ಶಾಸ್ತ್ರಿಮಠ ಹಾಗೂ ಪ್ರಮುಖರು ಉಪಸ್ಥಿತರಿದ್ದರು.

ಟ್ವೀಟ್ ಮೂಲಕ ಮಾಹಿತಿ:

ಪೊಲೀಸ್ ಅಧಿಕಾರಿ ಆಗಿ ವೃತ್ತಿಜೀವನ ಅಂತ್ಯಗೊಂಡಿರುವ ಹಾಗೂ ರಾಜಕೀಯ ಸೇರ್ಪಡೆ ಕುರಿತು ನಿನ್ನೆಯಷ್ಟೇ ಭಾಸ್ಕರ್ ರಾವ್ ಟ್ವೀಟ್ ಮಾಡಿದ್ದರು. 32 ವರ್ಷಗಳ ಐಪಿಎಸ್ ಜೀವನಕ್ಕೆ ತೆರೆ ಎಳೆಯುತ್ತಿದ್ದೇನೆ. ನನ್ನ ಕುಟುಂಬಕ್ಕೆ, ಗೆಳೆಯರಿಗೆ, ಸಹೋದ್ಯೋಗಿಗಳಿಗೆ, ಹಿರಿ, ಕಿರಿಯರಿಗೆ, ಪಕ್ಷಾತೀತವಾಗಿ ಕರ್ನಾಟಕದ ಸರ್ಕಾರಗಳಿಗೆ ಧನ್ಯವಾದಗಳು ಎಂದು ಅವರು ಟ್ವೀಟ್ ಮೂಲಕ ತಿಳಿಸಿದ್ದರು.

ಮುಂದಿನ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಆಪ್ ನಿಂದ ಭಾಸ್ಕರ್ ರಾವ್ ಸ್ಪರ್ಧೆ ಮಾಡುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net