ಮಾಜಿ IPS ಕೊಲೆ ಪ್ರಕರಣ; ಅಮ್ಮ, ತಂಗಿಯೇ...; ಅಪ್ಪನ ಹತ್ಯೆ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ​ ಮಗ! | Murder Case

dk - 2025-04-21T132032.982
Published on

Murder Case : ಕರ್ನಾಟಕ ಮಾಜಿ ಐಜಿ-ಡಿಜಿಪಿ(ರಾಜ್ಯ ಪೊಲೀಸ್​ ಮಹಾನಿರ್ದೇಶಕ) ಓಂ ಪ್ರಕಾಶ್​ ಅವರನ್ನು ಬೆಂಗಳೂರಿನ ಎಚ್​ಆರ್​ಸ್​ ಲೇಔಟ್​ನ ಮನೆಯಲ್ಲಿ ತನ್ನ ಪತ್ನಿಯೇ ಭೀಕರವಾಗಿ ಹತ್ಯೆ ಮಾಡಿದ ಘಟನೆ ನಡೆದಿದೆ. ಇದೀಗ ಈ ಪ್ರಕರಣ ರಾಜ್ಯದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಹಲ್​ಚಲ್​​ ಎಬ್ಬಿಸಿದೆ.

ಇನ್ನು ರಕ್ತದ ಮಡುವಿನಲಲ್ಲಿನ ಬಿದ್ದಿದ್ದ ಓಂ ಪ್ರಕಾಶ್​ ಶವ ಮತ್ತು ಕೊಲೆಯಾದ ಸ್ಥಳದಲ್ಲಿ ಬಿದ್ದಿದ್ದ 2 ಚಾಕು ಮತ್ತು ಬಾಟಲ್​ ಪತ್ತೆಯಾಗಿದೆ. ಪ್ರಾಥಮಿಕ ತನಿಖೆ ಪ್ರಕಾರ, ಪತ್ನಿ ಪಲ್ಲವಿ ಹಾಗೂ ಮಗಳು ಕೃತಿಯನ್ನು ಶಂಕೆಯ ಮೇಲೆ 12 ಗಂಟೆಗಳ ಕಾಲ ಪೊಲೀಸರು ಸುದೀರ್ಘ ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಯಾರನ್ನು ಬಂಧಿಸಿಲ್ಲ. ಇದೆಲ್ಲದರ ನಡುವೆ ಹತ್ಯೆಯಾದ ಓಂಪ್ರಕಾಶ್​​ ಮಗ ಕಾರ್ತಿಕೇಶ್​​ ಅಮ್ಮ ಮತ್ತು ಸಹೋದರಿಯ ಬಗ್ಗೆ ಶಾಕಿಂಗ್​ ಹೇಳಿಕೆಯೊಂದನ್ನು ಕೊಟ್ಟಿದ್ದಾರೆ.

ಕಾರ್ತಿಕೇಶ್​ ಹೇಳಿದ್ದೇನು..?

ತನ್ನ ತಾಯಿ ಪಲ್ಲವಿ ತನ್ನ ತಂದೆಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕುತ್ತಿದ್ದಳು ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಈ ಬೆದರಿಕೆಗಳಿಂದಾಗಿ, ಪ್ರಕಾಶ್ ತನ್ನ ಸಹೋದರಿಯೊಂದಿಗೆ ಇರಲು ಹೋಗಿದ್ದ. ಆದರೆ, ಕೊಲೆಗೆ ಎರಡು ದಿನಗಳ ಮುಂಚೆ, ಅವರ ಮಗಳು ಕೃತಿ ಅವರನ್ನು ಭೇಟಿ ಮಾಡಿ ಮನೆಗೆ ಹಿಂತಿರುಗುವಂತೆ ಒತ್ತಡ ಹೇರಿದ್ದಳು. ಅವರ( ಓಂಪ್ರಕಾಶ್​) ಇಚ್ಛೆಗೆ ವಿರುದ್ಧವಾಗಿ ಅವರು ಅವರನ್ನು ಮನೆಗೆ ಕರೆತಂದರು ಎಂದು ಕಾರ್ತಿಕೇಶ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಅದರ ಆಧಾರದ ಮೇಲೆ ಇದೀಗ ಪ್ರಕರಣ ದಾಖಲಿಸಲಾಗಿದೆ.

"ನನ್ನ ತಾಯಿ ಪಲ್ಲವಿ ಮತ್ತು ನನ್ನ ಸಹೋದರಿ ಕೃತಿ ಖಿನ್ನತೆಯಿಂದ ಬಳಲುತ್ತಿದ್ದಾರೆ ಮತ್ತು ನನ್ನ ತಂದೆಯೊಂದಿಗೆ ಆಗಾಗ್ಗೆ ಜಗಳವಾಡುತ್ತಿದ್ದರು. ನನ್ನ ತಂದೆಯ ಕೊಲೆಯಲ್ಲಿ ಅವರು ಭಾಗಿಯಾಗಿದ್ದಾರೆಂದು ನಾನು ಅನುಮಾನಿಸುತ್ತೇನೆ" ಎಂದು ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಸೊಕೊ ತಂಡದ ವಿಮರ್ಶೆ

ಘಟನಾ ಸ್ಥಳಕ್ಕೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತ ದಯಾನಂದ್, ಆಗ್ನೆಯ ವಿಭಾಗದ ಡಿಸಿಪಿ ಸಾರಾ ಫಾತಿಮಾ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಎಫ್‌ಎಸ್ಎಲ್, ಸೋಕೋ ತಂಡ ಪರಿಶೀಲನೆ ನಡೆಸಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸೇಂಟ್ ಜಾನ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಓಂಪ್ರಕಾಶ್ ಪುತ್ರ ನೀಡಿದ ದೂರಿನ ಮೇರೆಗೆ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

2017ರಲ್ಲಿ ನಿವೃತ್ತಿ

ಓಂ ಪ್ರಕಾಶ್ 2015ರಲ್ಲಿ ರಾಜ್ಯದ 38ನೇ ಡಿಜಿ ಮತ್ತು ಐಜಿಪಿಯಾಗಿದ್ದರು. ಬಿಹಾರ ಮೂಲದ ಓಂಪ್ರಕಾಶ್, 1981ರ ಬ್ಯಾಚ್‌ನ ಕರ್ನಾಟಕ ಕೇಡ‌ರ್ ಐಪಿಎಸ್ ಅಧಿಕಾರಿಯಾಗಿದ್ದರು. ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನಗರಗಳು, ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದರು. 2015ರಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕಗೊಂಡು 2017ರಲ್ಲಿ ನಿವೃತ್ತರಾಗಿದ್ದರು. ಕಾವೇರಿ ಜಂಕ್ಷನ್‌ನ ಪ್ರತಿಷ್ಠಿತ ಅಪಾರ್ಟ್ ಮೆಂಟ್‌ನಲ್ಲಿ ಫಾಲ್ಸ್ಯಟ್ ಹಾಗೂ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ಮನೆ ಇದೆ. ನಿವೃತ್ತಿ ಬಳಿಕ ಎಚ್‌ಎಸ್‌ಆರ್ ಲೇಔಟ್‌ನ ಮೂರು ಅಂತಸ್ತಿನ ಮನೆಯಲ್ಲಿ ಕುಟುಂಬದೊಂದಿಗೆ ನೆಲೆಸಿದ್ದರು. ಡಿಜಿ ಮತ್ತು ಐಜಿಪಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಗೃಹರಕ್ಷಕ ದಳದ ಕಮಾಂಡೆಂಟ್ ಜನರಲ್, ನಾಗರಿಕ ರಕ್ಷಣಾ ನಿರ್ದೇಶಕ ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.(ಏಜೆನ್ಸೀಸ್​)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net