

ನ್ಯೂಯಾರ್ಕ್: ಹಾರ್ವರ್ಡ್ ಮೆಡಿಕಲ್ ಕಾಲೇಜ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬ ಮೃತದೇಹಗಳ ಭಾಗಗಳನ್ನು ಅಕ್ರಮವಾಗಿ ಕದ್ದು, ಮಾರಾಟ ಮಾಡಿ, ಸಾಗಿಸುತ್ತಿದ್ದ ಆರೋಪದ ವೇಳೆ ಬಂಧಿಸಲಾಗಿದೆ.
ಹಾರ್ವರ್ಡ್ ಮೆಡಿಕಲ್ ಕಾಲೇಜಿನಲ್ಲಿ ಮ್ಯಾನೇಜರ್ ಆಗಿದ್ದ ಸೆಡ್ರಿಕ್ ಲಾಡ್ಜ್ ಬಂಧಿತ ಆರೋಪಿಯಾಗಿದ್ದಾನೆ. ಮೃತದೇಹದ ಭಾಗಗಳನ್ನು ತೆಗೆದುಕೊಂಡು ಮಾರಾಟ ಮಾಡಿದ್ದಾನೆ.
ಹಾರ್ವರ್ಡ್ ವೈದ್ಯಕೀಯ ಶಾಲೆಗೆ (HMS) ದಾನ ಮಾಡಿದ ದೇಹಗಳನ್ನು ಶಿಕ್ಷಣ, ಬೋಧನೆ ಅಥವಾ ಸಂಶೋಧನಾ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಆದರೆ ಈ ಶವಗಳಿಂದಲೇ ದೇಹದ ಭಾಗಗಳನ್ನು ಕದ್ದು ಕಳ್ಳಸಾಗಣೆ ಮಾಡುತ್ತಿದ್ದರು.
ಈ ಕುರಿತಾಗಿ ಮಾತನಾಡಿದ ಅಧಿಕಾರಿಯೊಬ್ಬರು, ಲಾಡ್ಜ್ ಇತರ ಐದು ಸಹಚರರ ಜೊತೆಗೆ ಮಾನವ ಅವಶೇಷಗಳನ್ನು ಖರೀದಿ ಮತ್ತು ಮಾರಾಟ ಜಾಲ ನಡೆಸುತ್ತಿದ್ದರು. ಶವಾಗಾರದಿಂದ ತೆಗೆದು ನ್ಯೂ ಹ್ಯಾಂಪ್‌ಶೈರ್‌ನಲ್ಲಿರುವ ಅವರ ನಿವಾಸಕ್ಕೆ ಸಾಗಿಸುತ್ತಿದ್ದರು ಎಂದು ತಿಳಿದು ಬಂದಿದೆ.
2018 ರಿಂದ 2022 ರವರೆಗೆ ಸೆಡ್ರಿಕ್ ಲಾಡ್ಜ, ಶವಸಂಸ್ಕಾರದ ಮೊದಲು ವೈದ್ಯಕೀಯ ಸಂಶೋಧನೆ ಮತ್ತು ಶಿಕ್ಷಣಕ್ಕಾಗಿ ದಾನ ಮಾಡಿದ ಅಂಗಗಳು ಮತ್ತು ಶವಗಳ ಇತರ ಭಾಗಗಳನ್ನು ಕದ್ದಿದ್ದಾರೆ. ದೇಹದ ಭಾಗಗಳನ್ನು ಮನೆಗೆ ತೆಗೆದುಕೊಂಡು ಹೋಗಿ, ಅಲ್ಲಿ ಅವರು ಮತ್ತು ಅವರ ಪತ್ನಿ ಇತರ ಆರೋಪಿಗಳಾದ ಕತ್ರಿನಾ ಮ್ಯಾಕ್ಲೀನ್ ಮತ್ತು ಜೋಶುವಾ ಅವಶೇಷಗಳನ್ನು ಮಾರಾಟ ಮಾಡುತ್ತಿದ್ದರು. ಈ ಪ್ರಕರಣ ಬೆಳಕಿಗೆ ಬರುತ್ತುದ್ದಂತೆ ಹಾರ್ವರ್ಡ್ ಮೆಡಿಕಲ್ ಕಾಲೇಜ್, ಲಾಡ್ಜ್ ಅನ್ನು ಮೇ 6 ರಂದು ವಜಾಗೊಳಿಸಿದೆ. ಈ ಎಲ್ಲಾ ಆರೋಪಗಳ ಅಡಿಯಲ್ಲಿ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.