ಇತ್ತೀಚೆಗಷ್ಟೇ ಇಡೀ ಸ್ಯಾಂಡಲ್ವುಡ್ ಕಲಾವಿದರೆಲ್ಲ ಶಿವಣ್ಣನ ಮನೆಯಲ್ಲಿ ಸೇರಿ, ಸಿನಿಮಾರಂಗದ ಮುಂದಿನ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಿದ್ದರು. ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ಸ್ಯಾಂಡಲ್ವುಡ್ನ ಸಾರಥ್ಯ ವಹಿಸಿಕೊಳ್ಳುವುದೆಂದೂ ಇದೇ ವೇಳೆ ಎಲ್ಲರ ನಿರ್ಧಾರವಾಗಿತ್ತು. ಅದಕ್ಕೆ ಶಿವಣ್ಣನ ಕಡೆಯಿಂದಲೂ ಸಮ್ಮತಿ ಸಿಕ್ಕಿತ್ತು. ಇದೀಗ ಆ ಪ್ರಯುಕ್ತ ಶುಭಕೋರಲು ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಸಹ ಶಿವಣ್ಣ ಅವರ ಮನೆಗೆ ಆಗಮಿಸಿ ಶುಭಕೋರಿದ್ದಾರೆ. ನಾಗವಾರದ ಮನೆಗೆ ಆಗಮಿಸಿದ ವೆಂಕಟೇಶ್, ಸುಮಾರು ಗಂಟೆಗಳ ಹೊತ್ತು ಶಿವಣ್ಜ ಜತೆ ಉಭಯಕುಶಲೋಪರಿ ವಿಚಾರಿಸಿ, ಸಿನಿಮಾ, ಕರೊನಾ, ನೆರೆಹಾವಳಿ ಹೀಗೆ ಎಲ್ಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೇ ವೇಳೆ ಚಿತ್ರ ನಿರ್ಮಾಪಕರಾದ ಕೆ.ಪಿ. ಶ್ರೀಕಾಂತ್, ನಿರ್ದೇಶಕ ಆರ್. ಚಂದ್ರು ಸೇರಿ ಹಲವರು ಇದ್ದರು. ಆ ಮಾತುಕತೆಯ ಫೋಟೋಗಳು ಇಲ್ಲಿವೆ.