

ಚಿತ್ರದುರ್ಗ: ರಾಹುಲ್ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಭಾಗವಹಿಸಿರುವ ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೊರವರ ಕುಣಿತಕ್ಕೆ ಹೆಜ್ಜೆ ಹಾಕುವ ಮೂಲಕ ಗಮನ ಸೆಳೆದರು.
ಗುರುವಾರ ಸಂಜೆ ಸಿದ್ದರಾಮಯ್ಯ ಮೊಳಕಾಲ್ಮೂರು ತಾಲೂಕು ಕಣಕುಪ್ಪೆ ಗ್ರಾಮದ ಕಾಂಗ್ರೆಸ್ ಮುಖಂಡ ಕುಮಾರ ಗೌಡರ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಗೊರವರ ಕುಣಿತದ ಮೂಲಕ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ನೃತ್ಯಕ್ಕೆ ಮನಸೋತ ಸಿದ್ದರಾಮಯ್ಯ ಕೂಡ ಹೆಜ್ಜೆ ಹಾಕಿದರು.
ಈ ಹಿಂದೆ ಮೈಸೂರಿನಲ್ಲಿ ವೀರಗಾರರ ಕುಣಿತದಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದ್ದ ಸಿದ್ದರಾಮಯ್ಯ ಇಂದು ಕಣಕುಪ್ಪೆಯಲ್ಲಿ ಗೊರವರ ಕುಣಿತಕ್ಕೆ ಮನಸೋತರು.