

ಕೊಪ್ಪಳ: ಒಳ ಮೀಸಲಾತಿಗೆ ಎಲ್ಲರ ಒಮ್ಮತವಿಲ್ಲ. ಲಂಬಾಣಿ, ಭೋವಿ, ಸಮುದಾಯಗಳು ವಿರೋಧ ಮಾಡುತ್ತಿದ್ದಾರೆ. ಹೀಗಾಗಿ ಒಳಮೀಸಲಾತಿ ನೀಡುವುದು ಕಷ್ಟವಾಗಲಿದೆ. ಸಂವಿಧಾನದಲ್ಲಿ ಎಲ್ಲರಿಗೂ ಮೀಸಲಾತಿ ಅವಕಾಶ ಇದೆ. ಶಿಕ್ಷಣ ಹಾಗೂ ಉದ್ಯೋಗದಲ್ಲಿ ಮೀಸಲಾತಿ ನೀಡಲಾಗಿದೆ ಎಂದು ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
1937ರ ಸಮಾವೇಷದಲ್ಲಿ ಸಾರ್ವಕರ್ ಭಾರತ ಇಬ್ಬಾಗ ಮಾಡಲು ಹೇಳಿದರು. ಹಿಂದೂ - ಮುಸ್ಲಿಂರಿಂದ ಒಂದೇ ದೇಶದಲ್ಲಿ ಇರುವುದಕ್ಕಾಗುವುದಿಲ್ಲ. ಹೀಗಾಗಿ ದೇಶ ಇಬ್ಬಾಗ ಮಾಡಿ ಎಂದು ಸಾವರ್ಕರ್ ಹೇಳಿದ್ದರು. ಇತಿಹಾಸ ತಿರುಚುವವರಿಂದ ಸತ್ಯದ ಮಾತು ನಿರೀಕ್ಷಿಸುವುದು ತಪ್ಪು. ತ್ಯಾಗ ಬಲಿದಾನ ಮಾಡಿ ಭಾರತಕ್ಕೆ ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ತಂದುಕೊಟ್ಟಿತು. ಆರ್ಎಸ್ಎಸ್ನವರು ಸ್ವಾತಂತ್ರ್ಯ ಹೋರಾಟ ಮಾಡಿದ್ರಾ? ಎಂದು ಬಿಜೆಪಿ ನಾಯಕರಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದರು.
ಭಾರತದಾದ್ಯಂತ ಐತಿಹಾಸಿಕ ಪದಾಯತ್ರೆ ನಡೆಯುತ್ತಿದೆ. ಹಿಂದೆಂದೂ ಇಷ್ಟು ದೊಡ್ಡ ಮಟ್ಟದ ಪಾದಯಾತ್ರೆ ನಡೆದಿರಲಿಲ್ಲ. ದೇಶದ ಐಕ್ಯತೆಗಾಗಿ ಪದಯಾತ್ರೆ ನಡೆಯುತ್ತಿದೆ. ಮೋದಿ ಸರ್ಕಾರದ ಬಂದ ಮೇಲೆ ದೇಶದಲ್ಲಿ ಧರ್ಮ,ದ್ವೇಷದ ರಾಜಕೀಯ ನಡೆಯುತ್ತಿದೆ. ಈಗಾಗಲೇ ಜನರಲ್ಲಿ ಅಪನಂಬಿಕೆ ಶುರುವಾಗಿದೆ. ಹಿಂದೆಂದೂ ಕೆಳರಿಯದಷ್ಟು ಲಂಚ ಜಾಸ್ತಿಯಾಗಿದೆ ಎಂದು ಹೇಳಿದರು.