ಕೋವಿಡ್​ ವಿರುದ್ಧ ಹೋರಾಡುತ್ತಿರುವ ಬ್ರಿಟನ್​ ವೈದ್ಯರಿಗಾಗಿ 125 ಕೋಟಿ ರೂ. ಸಂಗ್ರಹಿಸಿದ 99ರ ಮಾಜಿ ಯೋಧ

sudina 1
Published on

ನವದೆಹಲಿ: ಜಗತ್ತನ್ನು ಆವರಿಸಿರುವ ಕೋವಿಡ್-19 ಸೋಂಕನ್ನು ಎದುರಿಸಲು ಮುಖ್ಯವಾಗಿ ಆರ್ಥಿಕ ಸಾಮರ್ಥ್ಯದ ಅಗತ್ಯವಿದೆ. ಹೀಗಾಗಿ ಎಲ್ಲರೂ ಆ ನಿಟ್ಟಿನಲ್ಲಿ ತಮ್ಮ ಕೊಡುಗೆ ನೀಡುತ್ತಿದ್ದಾರೆ.

ಬ್ರಿಟನ್​ನ ಮೊರಟೈನ್ ಪ್ರದೇಶ ನಿವಾಸಿ 99 ವರ್ಷದ ನಿವೃತ್ತ ಸೈನ್ಯಾಧಿಕಾರಿ ಕ್ಯಾಪ್ಟನ್ ಟಾಮ್ ಮುರೆ ಎನ್ನುವವರು ಕೋವಿಡ್-19 ಸೋಂಕಿನ ವಿರುದ್ಧ ಹೋರಾಡುತ್ತಿರುವ ದೇಶದ ವೈದ್ಯರಿಗಾಗಿ 125 ಕೋಟಿ ರೂ. (12 ಮಿಲಿಯನ್ ಪೌಂಡ್) ಸಂಗ್ರಹಿಸಿದ್ದಾರೆ.

ಎರಡನೇ ವಿಶ್ವಯುದ್ಧದಲ್ಲಿ ಪಾಲ್ಗೊಂಡಿದ್ದ ಅವರು ಮನೆಯ ಉದ್ಯಾನದ ಎದುರಿನ ಕಾಲುದಾರಿಯನ್ನು ನೂರು ಬಾರಿ ಕ್ರಮಿಸುವುದಾಗಿ ಘೊಷಿಸಿದರು. ಹಾಗೆ ಹಲವು ದಿನ ಕ್ರಮಿಸುತ್ತಲೇ ಅದನ್ನು ಆನ್​ಲೈನ್​ನಲ್ಲಿ ದಾಖಲಿಸಿ ಧನಸಂಗ್ರಹಕ್ಕೆ ನೆರವಾಗಲು ಕೋರಿದ್ದರು. ಈ ಕಾರ್ಯವನ್ನು ಮೆಚ್ಚಿದ 53ಕ್ಕೂ ಹೆಚ್ಚು ದೇಶಗಳ ಜನ ದೇಣಿಗೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net