

Operation Sindhura: ಆಪರೇಷನ್ ಸಿಂಧೂರ ಹೆಸರಿನಲ್ಲಿ ಭಾರತ ಸೇನಾ ಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ತಾಣಗಳ ಸುಮಾರು 9 ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿದೆ. ಈ ಕಾರ್ಯಚರಣೆಯಲ್ಲಿ ಅಂದಾಜು 90ಕ್ಕೂ ಅಧಿಕ ಉಗ್ರರರು ಬಲಿಯಾಗಿದ್ದಾರೆ. ಭಾರತ ಮಿಲಿಟರಿ ದಾಳಿ ನಡೆಸಿದ ಕೆಲವೇ ಗಂಟೆಗಳ ನಂತರ, ಭಾರತದ ಮಾಜಿ ಸೇನಾ ಮುಖ್ಯಸ್ಥ ಮನೋಜ್ ಮುಕುಂದ್ ನರವಣೆ ಅವರು ಎಕ್ಸ್ನಲ್ಲಿ ಹಾಕಿದ ಒಂದು ಪೋಸ್ಟ್ ಸಾಕಷ್ಟು ಕುತೂಹಲ ಕೆರಳಿಸಿದೆ. ಭಾರತದಿಂದ ಇನ್ನೂ ದೊಡ್ಡ ದಾಳಿ ನಡೆಯುವ ಸಾಧ್ಯತೆಯನ್ನು ತೆರೆದಿಟ್ಟಿದೆ.
ಅಭಿ ಪಿಕ್ಚರ್ ಬಾಕಿ ಹೈ...
ದಾಳಿ ನಡೆದ ಕೆಲವೇ ಗಂಟೆಗಳ ಬಳಿಕ ಅಭಿ ಪಿಕ್ಚರ್ ಬಾಕಿ ಹೈ... ಎಂದು ಅವರು X ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದರ ಅರ್ಥ ಸಿನಿಮಾ ಇನ್ನೂ ಮುಗಿದಿಲ್ಲ..ಎಂದರ್ಥ. ಈ ಮೂಲಕ ಭಾರತದಿಂದ ಇನ್ನೂ ದೊಡ್ಡ ದಾಳಿ ನಡೆಯುವ ಸಾಧ್ಯತೆಯನ್ನು ಬಹಿರಂಗವಾಗಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಏಪ್ರಿಲ್ 22 ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಈ ದಾಳಿಗಳು ನಡೆದವು, ಅದರಲ್ಲಿ ಹೆಚ್ಚಾಗಿ ಪ್ರವಾಸಿಗರು 26 ಜನರು ಸಾವನ್ನಪ್ಪಿದರು. ಪಹಲ್ಗಾಮ್ ಭಯೋತ್ಪಾದಕ ದಾಳಿಯು ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ನಾಗರಿಕರ ಮೇಲೆ ನಡೆದ ಅತ್ಯಂತ ಮಾರಕ ದಾಳಿಗಳಲ್ಲಿ ಒಂದಾಗಿದೆ.
ಪಾಕಿಸ್ತಾನದಲ್ಲಿ ಸೇನಾ ದಾಳಿ ದೃಢಪಟ್ಟ ಸ್ವಲ್ಪ ಸಮಯದ ನಂತರ, ಭಾರತೀಯ ಸೇನೆಯು X ನಲ್ಲಿ ಪೋಸ್ಟ್‌ನಲ್ಲಿ "ನ್ಯಾಯ ದೊರಕಿತು. ಜೈ ಹಿಂದ್!" ಎಂದು ಹಂಚಿಕೊಂಡಿದೆ.(ಏಜೆನ್ಸೀಸ್)