

ಹುಣಸೂರು: ಹುಣಸೂರು ವಿಧಾನಸಭಾ ಕ್ಷೇತ್ರದ ಬಗರ್ ಹುಕುಂ ಸಾಗುವಳಿ ಸಕ್ರಮೀಕರಣ ಸಮಿತಿ(ಅಕ್ರಮ ಸಕ್ರಮ)ಯನ್ನು ರಚಿಸಲಾಗಿದ್ದು, ಶಾಸಕ ಜಿ.ಡಿ.ಹರೀಶ್‌ಗೌಡ ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರ ಸಮಿತಿಯನ್ನು ರಾಜ್ಯ ಸರ್ಕಾರ ನೇಮಿಸಿದೆ.
ಸಮಿತಿಯ ಸದಸ್ಯರಾಗಿ ಶೇಖರ್ ಬಿನ್ ಜವರೇಗೌಡ ಧರ್ಮಾಪುರ( ಸಾಮಾನ್ಯ), ಎಚ್.ಎಸ್.ಕುಮಾರ್ ಬಿನ್ ಸಣ್ಣಪ್ಪ ಹರಗನಹಳ್ಳಿ ಗ್ರಾಮ (ಪರಿಶಿಷ್ಟ ಜಾತಿ)ಹಾಗೂ ಲತಾ ಕೋಂ ಎಚ್.ಎಸ್.ಶ್ರೀಕಂಠಪ್ಪ ಹುಣಸೂರು ಟೌನ್.(ಮಹಿಳೆ) ನೇಮಕಗೊಂಡಿದ್ದಾರೆ. ಸಮಿತಿಯ ಸದಸ್ಯ ಕಾರ್ಯದರ್ಶಿಯಾಗಿ ತಹಸೀಲ್ದಾರ್ ಮಂಜುನಾಥ್ ಕಾರ್ಯ ನಿರ್ವಹಿಸಲಿದ್ದಾರೆಂದು ಕಂದಾಯ ಇಲಾಖೆಯ ಪೀಠಾಧಿಕಾರಿ ಮುತ್ತುರಾಜ್ ಆದೇಶ ಹೊರಡಿಸಿದ್ದಾರೆ.