ಅಖ್ವಾನ್ ಸೈಕ್ಲೋನ್ ಸೃಷ್ಟಿ: ರಾಜ್ಯದಲ್ಲಿ ಮೂರು ದಿನ ಸಾಧಾರಣ ಮಳೆ - Formation of Cyclone 'Akhwan

ಚಂಡಮಾರುತ ಪ್ರಭಾವದಿಂದ ಗಾಳಿ ವೇಗ ಹೆಚ್ಚಾಗಲಿದೆ. ಮಧ್ಯ ಬಂಗಾಳ ಕೊಲ್ಲಿಯಲ್ಲಿ ನ.18ರಿಂದ ಗಂಟೆಗೆ 120-130 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಕೆಲವೊಮ್ಮೆ ಇದು 145 ಕಿ.ಮೀ.ವರೆಗೂ ತಲುಪಬಹುದು. ಹವಾಮಾನ ವೈಪರೀತ್ಯ ಉಂಟಾಗುವ ಹಿನ್ನೆಲೆಯಲ್ಲಿ ಸಮುದ್ರದಿಂದ ದಡಕ್ಕೆ ಮರಳುವಂತೆ ಮೀನುಗಾರರಿಗೆ ಈಗಾಗಲೇ ಸೂಚಿಸಲಾಗಿದೆ.
Moderate rain in Karnataka
Cyclone Akhwan
Published on: 

ಬೆಂಗಳೂರು: (Cyclone 'Akhwan) ಬಂಗಾಳ ಕೊಲ್ಲಿಯ ಆಗ್ನೇಯ ಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಸೋಮವಾರ (ನ.17) ‘ಅಖ್ವಾನ್’ ಚಂಡಮಾರುತವಾಗಿ ರೂಪುಗೊಳ್ಳಲಿದ್ದು, ಕರ್ನಾಟಕ, ತಮಿಳುನಾಡು, ಪುದುಚೇರಿ, ಕಾರೈಕಲ್ ಪ್ರದೇಶಗಳಲ್ಲಿ ಮುಂದಿನ 3 ದಿನ ಸಾಧಾರಣ ಮಳೆ ಸುರಿದರೆ, ಕರಾವಳಿ ಆಂಧ್ರಪ್ರದೇಶ, ತೆಲಂಗಾಣದ ಕೆಲಪ್ರದೇಶ ಮತ್ತು ಯಾನಂನಲ್ಲಿ ನ.19ರಿಂದ, ಒಡಿಶಾದಲ್ಲಿ ನ.20ರಿಂದ ಭಾರಿ ಮಳೆಯಾಗುವ ಮುನ್ಸೂಚನೆ ಇದೆ.

ಚಂಡಮಾರುತ ಪ್ರಭಾವದಿಂದ ಗಾಳಿ ವೇಗ ಹೆಚ್ಚಾಗಲಿದೆ. ಮಧ್ಯ ಬಂಗಾಳ ಕೊಲ್ಲಿಯಲ್ಲಿ ನ.18ರಿಂದ ಗಂಟೆಗೆ 120-130 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಕೆಲವೊಮ್ಮೆ ಇದು 145 ಕಿ.ಮೀ.ವರೆಗೂ ತಲುಪಬಹುದು. ಹವಾಮಾನ ವೈಪರೀತ್ಯ ಉಂಟಾಗುವ ಹಿನ್ನೆಲೆಯಲ್ಲಿ ಸಮುದ್ರದಿಂದ ದಡಕ್ಕೆ ಮರಳುವಂತೆ ಮೀನುಗಾರರಿಗೆ ಈಗಾಗಲೇ ಸೂಚಿಸಲಾಗಿದೆ. ಅಂಡಮಾನ್ ಸಮುದ್ರ, ಆಗ್ನೇಯ ಮತ್ತು ನೈಋತ್ಯ ಬಂಗಾಳ ಕೊಲ್ಲಿ, ಮಧ್ಯ ಮತ್ತು ವಾಯವ್ಯ ಬಂಗಾಳಕೊಲ್ಲಿಯಲ್ಲಿ ಮೀನುಗಾರಿಕೆ ನಡೆಸದಂತೆ ಐಎಂಡಿ ಎಚ್ಚರಿಕೆ ನೀಡಿದೆ.

Also Read
ಸರ್ಕಾರದಿಂದ ಶ್ರಮಿಕ ನಿವಾಸ ಕಲ್ಪಿಸುವ ಕಂಪನಿಗಳಿಗೆ ಸಬ್ಸಿಡಿ - (Shramika Nivas – Live Near Work)
Moderate rain in Karnataka

ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚನೆ

ಭಾರಿ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ, ಒಡಿಶಾ ಮತ್ತು ತಮಿಳುನಾಡಿನ ರೈತರು ಕಟಾವಿಗೆ ಬಂದಿರುವ ಭತ್ತ, ಹತ್ತಿ, ಕಡಲೆಕಾಯಿ, ತರಕಾರಿ ಬೆಳೆಗಳನ್ನು ಕೂಡಲೇ ಕಟಾವು ಮಾಡಿ ಸುರಕ್ಷಿತ ಸ್ಥಳಗಳಲ್ಲಿ ಸಂಗ್ರಹಿಸಿಡುವಂತೆ ಸೂಚಿಸಲಾಗಿದೆ. ಜಮೀನುಗಳಲ್ಲಿ ಸರಾಗವಾಗಿ ನೀರು ಹರಿದುಹೋಗಲು ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ಸಲಹೆ ನೀಡಲಾಗಿದೆ. ಬಿರುಗಾಳಿಯಿಂದ ಮರಗಳು ಬೀಳುವುದು, ಬೆಳೆಗಳಿಗೆ ಹಾನಿಯಾವುದು, ತಗ್ಗು ಪ್ರದೇಶಗಳಲ್ಲಿ ಜಲಾವೃತ ಹಾಗೂ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಹವಾಮಾನ ಮುನ್ಸೂಚನೆಯನ್ನು ಗಮನಿಸಿ ಸುರಕ್ಷಿತ ಸ್ಥಳಗಳಿಗೆ ತೆರಳಲು ಸಿದ್ಧರಾಗಿರುವಂತೆ ಜನರಿಗೆ ಇಲಾಖೆ ಸೂಚಿಸಿದೆ.

ಬೆಂಗಳೂರು ನಗರ ಸೇರಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾನುವಾರ ಮೋಡ ಕವಿದ ವಾತಾವರಣ ಕಾಣಿಸಿಕೊಂಡಿತ್ತು. ಸೈಕ್ಲೋನ್‌ನಿಂದ ರಾಜ್ಯಕ್ಕೆ ದೊಡ್ಡ ಮಟ್ಟದ ಪರಿಣಾಮ ಇರುವುದಿಲ್ಲ. ಆದರೆ, ರಾಯಚೂರು ಮತ್ತು ಯಾದಗಿರಿ ಸೇರಿ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ತುಸು ಬಿರುಸಾಗಿ ಮಳೆಯಾಗಲಿದೆ.

ಡಾ. ಶ್ರೀನಿವಾಸರೆಡ್ಡಿ, ಹಿರಿಯ ಹವಾಮಾನ ತಜ್ಞ.