50 ತಾಲೂಕು ಬಗರ್ ಹುಕುಂ ಸಮಿತಿ ರಚನೆ: ಕೃಷ್ಣ ಬೈರೇಗೌಡ

KB (1)
Published on

ಬೆಂಗಳೂರು: ಬಗರ್ ಹುಕುಂ ಸಮಿತಿ ರಚಿಸಲು 50 ತಾಲೂಕುಗಳಿಂದ ಪ್ರಸ್ತಾವನೆ ಬಂದಿದ್ದು, ಬುಧವಾರ ಸಮಿತಿ ರಚಿಸಿ ಆದೇಶ ಹೊರಡಿಸುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಿತಿ ರಚನೆ ಬಗ್ಗೆ ಮಾರ್ಗಸೂಚಿ ಬಿಡುಗಡೆ ಆಗಿದೆ. ಈ ಮಾರ್ಗಸೂಚಿ ಅನ್ವಯ ಸಮಿತಿ ರಚನೆ ಮಾಡಲಾಗುತ್ತದೆ. ಉಳಿದ ಸಮಿತಿಗಳನ್ನು ಒಂದು ವಾರದೊಳಗೆ ರಚನೆ ಮಾಡಲಾಗುವುದು ಎಂದು ಹೇಳಿದರು.

ತಹಸೀಲ್ದಾರ್/ಎಸಿ/ಡಿಸಿ ಪ್ರಕರಣಕ್ಕೆ ಗಡುವು

ತಹಸೀಲ್ದಾರ್ ಹಂತದಲ್ಲಿನ ಅರೆ ನ್ಯಾಯಿಕ ಪ್ರಕರಣ 90 ದಿನ, ಎಸಿ, ಡಿಸಿ ಮಟ್ಟದಲ್ಲಿ 6 ತಿಂಗಳಲ್ಲಿ ಇತ್ಯರ್ಥ ಆಗಬೇಕು. ಆದರೆ ತಹಸೀಲ್ದಾರ್ ಬಳಿ 1 ವರ್ಷ ಮೇಲ್ಪಟ್ಟವು 2215 ಅರ್ಜಿ ಇವೆ. ಎಸಿ ಮಟ್ಟದಲ್ಲಿ 51,339 ಪ್ರಕರಣ, ಡಿಸಿ ಹಂತದಲ್ಲಿ 9950 ಪ್ರಕರಣ ಬಾಕಿ ಇವೆ. ವರ್ಷದಿಂದ ಬಾಕಿ ಇರುವ ಪ್ರಕರಣ ಸಂಖ್ಯೆ ಈಗ 680 ಕ್ಕೆ ಇಳಿದಿದೆ. ಡಿಸೆಂಬರ್ ಅಂತ್ಯಕ್ಕೆ ತಹಸೀಲ್ದಾರ್ ಹಂತದಲ್ಲಿ ಎಲ್ಲವೂ ಇತ್ಯರ್ಥ ಆಗಬೇಕೆಂದು ಆದೇಶ ಮಾಡಲಾಗಿದೆ. ಎಸಿ ಮಟ್ಟದಲ್ಲಿ 27,960 ಪ್ರಕರಣ ಇತ್ಯರ್ಥ ಆಗಿದೆ. 32,797 ಪ್ರಕರಣ ಐದಾರು ವರ್ಷದ್ದು ಬಾಕಿ ಇದ್ದವು. 9873 ಬಾಕಿ ಇವೆ. ಜನವರಿ ಅಂತ್ಯದೊಳಗೆ ಇತ್ಯರ್ಥಪಡಿಸಲು ಸೂಚಿಸಗಿದೆ. ಫೆಬ್ರವರಿ ಅಂತ್ಯದೊಳಗೆ ಒಂದು ವರ್ಷಕ್ಕಿಂತ ಹಿಂದಿನ ಪ್ರಕರಣಗಳು ಬಾಕಿ ಇರಬಾರದು ಎಂದು ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

ಇ-ಜಮಾಬಂದಿಗೆ ಚಿಂತನೆ

ಆಪ್ ಮೂಲಕ ಇ-ಜಮಾಬಂದಿ ಮಾಡುತ್ತೇವೆ. ಮುಂದಿನ ವರ್ಷದಿಂದ ಈ ಕೆಲಸ ಆರಂಭಿಸಲು ಚಿಂತನೆ ನಡೆದಿದೆ. ಇದರಿಂದ ಸರ್ಕಾರಿ ಜಮೀನಿನ ಸಂರಕ್ಷಣೆ ಸಹ ಆಗುತ್ತದೆ. ಆರ್‌ಟಿಸಿಗೆ ಆಧಾರ್ ಲಿಂಕ್ ಮಾಡಲು ಅಭಿಯಾನ ಆರಂಭಿಸುತ್ತೇವೆ. ನಾಲ್ಕು ಕಂದಾಯ ವಿಭಾಗದ 6 ತಾಲೂಕುಗಳಲ್ಲಿ ಎಂಡ್ ಟು ಎಂಡ್ ಆಟೋಮೇಷನ್ ಮಾಡಲಾಗುತ್ತದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net