ಹಲವು ವರ್ಷಗಳಿಂದಲೂ ಬಗರ್ ಹುಕುಂ ದರಕಾಸ್ತು ಸಮಿತಿ ರಚನೆಯಾಗದ ಕಾರಣ ಸಾವಿರಾರು ರೈತರಿಗೆ ತೊಂದರೆ ಆಗುತ್ತಿದ್ದು, ಭೂಮಿ ವಂಚಿತರಾಗುವಂತಾಗಿದೆ ಎಂದು ದಲಿತ ಸಂರ್ಷ ಸಮಿತಿ ಜಿಲ್ಲಾ ಸಂಚಾಲಕ ಎನ್.ಎ.ವೆಂಕಟೇಶ್ ದೂರಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,ವಿಧಾನಸಭೆ ಚುನಾವಣೆ ನಡೆದು ಎರಡೂವರೆ ವರ್ಷ ಕಳೆದರೂ ೇತ್ರದಲ್ಲಿ ದರಕಾಸ್ತು ಸಮಿತಿ ರಚನೆ ಆಗಿಲ್ಲ. ಕೇಳಿದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಇಲ್ಲಿ ಜೆಡಿಎಸ್ ಶಾಸಕರು ಇದ್ದಾರೆ. ಹಾಗಾಗಿ ಸಮಿತಿ ರಚನೆ ಆಗಿಲ್ಲ ಎನ್ನುತ್ತಾರೆ.ಜತೆಗೆ ಕಾಂಗ್ರೆಸ್ನಲ್ಲಿ ರಾಜೀವ್ ಗೌಡ, ಪುಟ್ಟು ಆಂಜಿನಪ್ಪ ಹಾಗೂ ಮಾಜಿ ಶಾಸಕ ವಿ.ಮುನಿಯಪ್ಪ ಅವರ ಬೆಂಬಲಿಗರ ಬಣಗಳಿದ್ದು, ಈ 3 ಬಣಗಳ ನಡುವೆ ದರಕಾಸ್ತು ಸಮಿತಿಗೆ ನಾಮ ನಿರ್ದೇಶನಕ್ಕೆ ಹೆಸರುಗಳನ್ನು ಸೂಚಿಸುವಲ್ಲಿ ಒಮ್ಮತ ಮೂಡದ ಕಾರಣ ದರಕಾಸ್ತು ಸಮಿತಿಗೆ ನೇಮಕಾತಿ ಆಗಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಈ ಎರಡರಲ್ಲಿ ಯಾವುದೆ ಕಾರಣಕ್ಕಾಗಲಿ ದರಕಾಸ್ತು ಸಮಿತಿ ರಚನೆ ಆಗದಿದ್ದರೂ ತೊಂದರೆ ಮಾತ್ರ ರೈತರಿಗೆ ಆಗುತ್ತಿದೆ. ಅನೇಕ ವರ್ಷಗಳಿಂದಲೂ ಬಗರ್ ಹುಕುಂ ಸಾಗುವಳಿ ಚೀಟಿಗಾಗಿ ಅರ್ಜಿ ಹಾಕಿಕೊಂಡು ತಾವು ಸ್ವಾಧಿನದಲ್ಲಿದ್ದು, ಕೃಷಿ ನಡೆಸುತ್ತಿರುವವರು ಜಮೀನು ಮಂಜೂರಿಗಾಗಿ ಬಕ ಪಗಳಂತೆ ಕಾದಿದ್ದಾರೆ ಎಂದರು.
ರಾಜಕೀಯ ಕಾರಣಕ್ಕೋ ಇಲ್ಲವೇ ರೈತರ ಬಗ್ಗೆ ರ್ನಿಲಕ್ಷ$್ಯಕ್ಕೋ ಸಮಿತಿ ರಚನೆ ಆಗದೆ ರೈತರಿಗೆ ತೊಂದರೆ ಆಗುವುದಕ್ಕೆ ನಾವು ಬಿಡುವುದಿಲ್ಲ. ಕೂಡಲೇ ಸಮಿತಿ ರಚನೆ ಆಗಬೇಕು, ಭೂ ಮಂಜೂರಾತಿಗೆ ಕ್ರಮ ಕೈಗೊಳ್ಳಬೇಕು. ಒಂದೊಮ್ಮೆ ಸಮಿತಿ ರಚನೆ ಮಾಡಲಾಗದಿದ್ದರೆ, ಜಿಲ್ಲಾಧಿಕಾರಿಗಳೆ ಸಭೆ ನಡೆಸಿ ನಿಯಮದಂತೆ ಭೂಮಿ ಮಂಜೂರು ಮಾಡಲು ಅವಕಾಶವಿದ್ದು ಆ ಕೆಲಸವಾದರೂ ಆಗಬೇಕೆಂದು ಒತ್ತಾಯಿಸಿದರು. ಇನ್ನು ೇತ್ರದ ಜಂಗಮಕೋಟೆ ಭಾಗದಲ್ಲಿ ಕೆಐಎಡಿಬಿಯು, ಯಾರು ಜಮೀನನ್ನು ಬಿಟ್ಟುಕೊಡಲು ಸಿದ್ಧರಿದ್ದಾರೋ ಅಂತಹ ರೈತರ ಜಮೀನನ್ನು ಮಾತ್ರವೇ ಸ್ವಾಧಿನ ಪಡಿಸಿಕೊಂಡು ಕೈಗಾರಿಕೆ ಪ್ರದೇಶ ಅಭಿವೃದ್ಧಿ ಪಡಿಸಲು ನಮ್ಮ ಅಭ್ಯಂತರವಿಲ್ಲ. ಇನ್ನು ಯಾರು ಜಮೀನು ನೀಡುವುದಿಲ್ಲವೋ ಅವರ ಜಮೀನನ್ನು ಸ್ವಾಧಿನ ಪ್ರಕ್ರಿಯೆಯಿಂದ ಕೈಬಿಡಬೇಕು ಎಂದರು.ಈ ಬಗ್ಗೆ ಸರ್ಕಾರ, ಕೆಐಎಡಿಬಿಯು ಅಧಿಕೃತವಾಗಿ ಪ್ರಕಟಣೆ ಹೊರಡಿಸಿ ರೈತರಲ್ಲಿನ ಆತಂಕ ದೂರ ಮಾಡಬೇಕೆಂದು ಒತ್ತಾಯಿಸಿದರು.