ಜೀವ ಸಂಕುಲ ಉಳಿವಿಗೆ ಅರಣ್ಯ ಬೆಳೆಸಿ

tke vanamahostava
ಬಂಬೂಸರ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಡಿಆರ್‌ಎ್ಒ ಚನ್ನೇಗೌಡ ಸಸಿ ನೆಟ್ಟರು. ಶಂಕರನಾರಾಯಣ, ಅನ್ನಪೂರ್ಣೇಶ್ವರಿ, ಮಲ್ಲಪ್ಪ ಇತರರಿದ್ದರು.
Published on

ತರೀಕೆರೆ: ಜೀವ ಸಂಕುಲಗಳ ಬೆಳವಣಿಗೆಗೆ ಗಿಡ, ಮರಗಳು ಅಗತ್ಯ ಎಂದು ಲಕ್ಕವಳ್ಳಿ ಡಿಆರ್‌ಎ್ಒ ಚನ್ನೇಗೌಡ ಹೇಳಿದರು.
ಬಾವಿಕೆರೆ ಗ್ರಾಪಂ ಬಂಬೂಸರ ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಶನಿವಾರ ಲಕ್ಕವಳ್ಳಿ ವಲಯ ಅರಣ್ಯಾಧಿಕಾರಿ ಕಚೆೇರಿಯಿಂದ ಏರ್ಪಡಿಸಿದ್ದ ವನ ಮಹೋತ್ಸವದಲ್ಲಿ ವಿವಿಧ ಜಾತಿಯ ಸಸಿ ನೆಟ್ಟು ಮಾತನಾಡಿದರು.
ಪರಿಸರ ಅಸಮತೋಲನದಿಂದ ಪ್ರಾಕೃತಿಕ ವೈಪರೀತ್ಯ ಉಂಟಾಗುತ್ತಿದೆ. ಶುದ್ಧ ಗಾಳಿ, ಸಮೃದ್ಧ ಮಳೆಗೆ ಗಿಡ, ಮರ ಬೆಳೆಸಬೇಕಿದೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಕಾಳಜಿ ವಹಿಸಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಡಿಆರ್‌ಎ್ಒ ಚನ್ನೇಗೌಡ, ಶಂಕರನಾರಾಯಣ, ಅನ್ನಪೂರ್ಣೇಶ್ವರಿ, ಶಾಲಾ ಮುಖ್ಯಶಿಕ್ಷಕ ಮಲ್ಲಪ್ಪ, ಸಹ ಶಿಕ್ಷಕ ಸತ್ಯನಾರಾಯಣ, ಶಾಲಾ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಮಂಜು, ಸುಬ್ರಮಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net