ಅರಣ್ಯ ಒತ್ತುವರಿ ಸರ್ವೇ ಡಿಸಿ ಗೊಂದಲದ ಹೇಳಿಕೆ ಸಲ್ಲ

klr fores
ಶ್ರೀನಿವಾಸಪುರ ತಾಲೂಕಿನ ಜಿಂಗಾಕುAಟೆ ಅರಣ್ಯ ಒತ್ತುವರಿ ಸಂಬಂಸಿದಂತೆ ಅಪರ ಜಿಲ್ಲಾಧಿಕಾರಿ ಮಂಗಳಾ ಅವರಿಗೆ ವಕೀಲ ಕೆ.ವಿ.ಶಿವಾರೆಡ್ಡಿ, ಶೇಷಾಪುರ ಗೋಪಾಲ್ ಅವರು ದಾಖಲೆಗಳನ್ನು ಸಲ್ಲಿಸಿದರು.
Published on

ಕೋಲಾರ: ಜಿಂಗಾಲಕುಂಟೆ ಅರಣ್ಯ ಭೂಮಿ ಸಂಬಂಧದ ದಾಖಲೆಗಳನ್ನು ವಕೀಲ ಕೆ.ವಿ.ಶಿವಾರೆಡ್ಡಿ ಹಾಗೂ ಕಾಂಗ್ರೆಸ್ ಮುಖಂಡ ಶೇಷಾಪುರ ಗೋಪಾಲ್ ಬುಧವಾರ ಅಪರ ಜಿಲ್ಲಾಧಿಕಾರಿ ಮಂಗಳಾ ಮೂಲಕ ಜಿಲ್ಲಾಧಿಕಾರಿಗೆ ಸಲ್ಲಿಸಿದರು.

ಈ ವೇಳೆ ವಕೀಲ ಕೆ.ವಿ.ಶಿವಾರೆಡ್ಡಿ ಮಾತನಾಡಿ, ಜ.15ಮತ್ತು 16ರಂದು ಎರಡು ದಿನ ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಜಂಟಿ ಸರ್ವೇ ಬಳಿಕ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಅರಣ್ಯ ಇಲಾಖೆಯಲ್ಲಿ ಜಮೀನು ಸಂಬಂಧ ದಾಖಲೆಗಳು ಇಲ್ಲ ಎಂದು ಹೇಳಿಕೆ ನೀಡಿದ್ದರು. ಆದ್ದರಿಂದ ಜಿಲ್ಲಾಡಳಿತ ಬಳಿ ಇಲ್ಲದ ದಾಖಲೆಗಳನ್ನು ಈಗ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಹೊಸಹುಡ್ಯ ಸರ್ವೇ ನಂ-1 ಮತ್ತು 2ರ ಜಮೀನು ಅರಣ್ಯ ಇಲಾಖೆಗೆ ಸೇರಿದ್ದು, ಅದನ್ನು ಕೆಲವರಿಗೆ ಮಂಜೂರು ಮಾಡಲಾಗಿದೆ. ಜತೆಗೆ ರಮೇಶ್ ಕುಮಾರ್ ಅವರು ಒತ್ತುವರಿ ಮಾಡಿಕೊಂಡಿರುವ ಆರೋಪ ಇದೆ. ಆದರೆ, ಜಮೀನಿನ ಮೂಲ ದಾಖಲೆಗಳಿಲ್ಲ ಎಂದು ಜಿಲ್ಲಾಧಿಕಾರಿಗಳು ಗೊಂದಲದ ಹೇಳಿಕೆ ನೀಡಿರುವುದು ಸರಿಯಲ್ಲ ಎಂದರು.

ಜಮೀನು ಸಂಬAಧ ದಾಖಲೆಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಜಿಲ್ಲಾಡಳಿತದಿಂದಲೇ ಪಡೆದುಕೊಂಡಿದ್ದೇವೆ. ಆದರೂ ಜಿಲ್ಲಾಽಕಾರಿಗಳು ಅರಣ್ಯ ಇಲಾಖೆಯಲ್ಲಿ ದಾಖಲೆಗಳು ಇಲ್ಲ ಎಂದಿರುವುದು ಖಂಡನೀಯ ಎಂದರು.

ಹೊಸಹುಡ್ಯ ಸರ್ವೇ ನಂ-1 ಮತ್ತು 2ರ ಅರಣ್ಯ ಭೂಮಿ ಸಂಬಂಸಿದ ಸೆಟಲ್‌ಮೆಂಟ್ ದಾಖಲೆಗಳು, ಗೆಜೆಟ್ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದ ಅವರು, 2014ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ.ರವಿ ಅವರು ಸಿದ್ಧಪಡಿಸಿರುವ ವರದಿಯ ಆಧಾರದ ಮೇರೆಗೆ ವರದಿ ಸಲ್ಲಿಸಲು ಈಗಿನ ಜಿಲ್ಲಾಧಿಕಾರಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಸರಿಯಾದ ರೀತಿ ಸರ್ವೇ ನಡೆಸುವುದಿಲ್ಲ ಎಂದು ಗೊತ್ತಾಗಿಯೇ, ಕೇಂದ್ರ ಅರಣ್ಯ ಇಲಾಖೆಗೆ ಪತ್ರ ಬರೆದು, ಫಾರೆಸ್ಟ್ ಆಫ್ ಇಂಡಿಯಾದಿAದಲೇ ಸರ್ವೇ ನಡೆಸಲು ಕೋರಿದ್ದೆವು. ಈಗಲೂ ಸಮರ್ಪಕವಾಗಿ ಇಲ್ಲದಿದ್ದರೆ ಪಾರ್ಟಿ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ತಿಳಿಸಿದರು. ಒತ್ತುವರಿದಾರರ ಪರವಾಗಿ ಸರ್ಕಾರ ನಿಂತಿದೆ. ಜಮೀನಿಗೆ ಸಂಬಂಸಿದಂತೆ ಮಂಜೂರು ಪತ್ರಗಳನ್ನು ಸೃಷ್ಟಿ ಮಾಡಿಕೊಂಡಿದ್ದಾರೆ, ಕ್ರಯ ಮಾಡಿಕೊಂಡು ಸಾಲ ಸಹ ಪಡೆದುಕೊಳ್ಳುತ್ತಿದ್ದಾರೆ. ಇದೇ ಶ್ರೀನಿವಾಸಪುರ ತಾಲೂಕಿನ ಸೃಷ್ಟಿಕರ್ತರು ಮಾಡುತ್ತಿರುವ ಕೆಲಸ ಎಂದು ಕಿಡಿಕಾರಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net