ಪಾಲಕರಿಂದ ಪ್ರತ್ಯೇಕವಾಗಿ ವಾಸಿಸುವಂತೆ ಗಂಡನನ್ನು ಪೀಡಿಸುವ ಪತ್ನಿಗೆ ವಿಚ್ಛೇದನ

COURTdownload
Published on

ತಿರುವನಂತಪುರ: ಪಾಲಕರಿಂದ ಪ್ರತ್ಯೇಕವಾಗಿ ವಾಸ ಮಾಡಬೇಕು ಎಂದು ಪತಿಯನ್ನು ಪೀಡಿಸುವ ಪತ್ನಿಗೆ ವಿಚ್ಛೇದನ ನೀಡಬಹುದು ಎಂದು ಕೇರಳ ಹೈಕೋರ್ಟ್ ಹೇಳಿದೆ.

ವೃದ್ಧ ಪಾಲಕರನ್ನು ಸಲಹುತ್ತಿರುವ ಪತಿಗೆ ಅವರನ್ನು ಬಿಟ್ಟು ಬಾ ಎಂದು ಪತ್ನಿ ಒತ್ತಾಯಿಸುತ್ತಿದ್ದರೆ ಇದನ್ನೂ ವಿಚ್ಛೇದನಕ್ಕೆ ಕಾರಣವೆಂದು ಪರಿಗಣಿಸಬಹುದು. ಪತ್ನಿಯಿಂದ ಇಂಥ ನಿರ್ದಯ ಬೇಡಿಕೆ ಬಂದರೆ ಪತಿಗೆ ಇದು ಉಭಯ ಸಂಕಟದ ಸಂದರ್ಭವಾಗುತ್ತದೆ.

ಆಗ ಆತ ಪಾಲಕರು ಅಥವಾ ಜೀವನದ ಸಂಗಾತಿಯಲ್ಲಿ ಒಬ್ಬರನ್ನು ಆಕೆ ಮಾಡಿಕೊಳ್ಳುವ ಇಕ್ಕಟ್ಟಿಗೆ ಸಿಲುಕುತ್ತಾನೆ. ಪತಿ ಬಯಸಿದರೆ ಈ ಕಾರಣವನ್ನು ಮುಂದಿಟ್ಟುಕೊಂಡು ಪತ್ನಿಯಿಂದ ಕಾನೂನಾತ್ಮಕವಾಗಿ ಬೇರ್ಪಡಬಹುದು ಎಂದು ಕೋರ್ಟ್ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net