ಬಿ-ಖಾತಾ ಮಾಡಿಕೊಡುವಂತೆ ಒತ್ತಾಯ

manavi
ಕ್ರಯ, ಕರಾರು, ಜಿಪಿಎ ದಾಖಲೆಗಳ ಆಧಾರದಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಬಿ-ಖಾತಾ ಮಾಡಿಕೊಡುವಂತೆ ಒತ್ತಾಯಿಸಿ ಎನ್.ಕೆ.ಶ್ಯಾಮಸುಂದರ್, ರಮೇಶ್, ರವಿ, ವಿಜಯಕುಮಾರ್, ಚಂದ್ರಶೇಖರ್ ಮತ್ತಿತರರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
Published on

ಶಿವಮೊಗ್ಗ: ನಗರ ವ್ಯಾಪ್ತಿ ಕಂದಾಯ ಭೂಮಿಯಲ್ಲಿ ಕ್ರಯ, ಕರಾರು, ಜಿಪಿಎ ದಾಖಲೆಗಳ ಆಧಾರದಲ್ಲಿ ಮನೆ ನಿರ್ಮಿಸಿಕೊಂಡು 20 ವರ್ಷಗಳಿಗಿಂತ ಹೆಚ್ಚು ಕಾಲದಿಂದ ವಾಸಿಸುತ್ತಿರುವವರಿಗೆ ಆಸ್ತಿಗೆ ಬಿ-ಖಾತಾ ಮಾಡಿಕೊಡಬೇಕು ಎಂದು ನಾಗರಿಕರು ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

15 ವರ್ಷಗಳ ಹಿಂದೆ ನಗರಸಭೆ ವ್ಯಾಪ್ತಿಗೊಳಪಟ್ಟ ಗಾಡಿಕೊಪ್ಪ, ಮಲವಗೊಪ್ಪ ಗ್ರಾಪಂ ವ್ಯಾಪ್ತಿಯ ಮನೆಗಳ ಸ್ವತ್ತುಗಳು, ಸರ್ಕಾರದ ಗ್ರಾಮ ಠಾಣಾ ಸ್ವತ್ತುಗಳು, ಕಂದಾಯ ಭೂಮಿಯ ಅಗ್ರಿಮೆಂಟ್ ಆಧಾರ ಪತ್ರ ಹಾಗೂ ಜಿಪಿಎ ಪತ್ರಗಳ ಅನ್ವಯ ಹಂಚಿಕೆ ಮಾಡಿರುವ ಹಕ್ಕುಪತ್ರಗಳ ಆಧಾರದ ಮೇಲೆ ಮನೆಗಳು ನಿರ್ಮಾಣವಾಗಿವೆ. ಸರ್ಕಾರಕ್ಕೆ ಇದರ ಮಾಹಿತಿ ನೀಡಿ ಎಲ್ಲ ಮನೆಗಳಿಗೂ ಬಿ-ಖಾತಾ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಸರ್ಕಾರ ಇ-ಖಾತಾ ಗೊಂದಲ ನಿವಾರಣೆ ಬಗ್ಗೆ ಕೆಲ ತೀರ್ಮಾನ ತೆಗೆದುಕೊಂಡಿದೆ. ಆದರೆ ಕಂದಾಯ ಭೂಮಿಯಲ್ಲಿ ಮನೆ ಕಟ್ಟಿಕೊಂಡಿರುವ ಸ್ವತ್ತುಗಳಿಗೆ ಬೇಕಾದ ಇ-ಖಾತಾ ಮಾಡಿಕೊಡಲು ಸರ್ಕಾರ ಕೂಡಲೇ ಮುಂದಾಗಬೇಕು. ಕಂದಾಯ ಭೂಮಿಯಲ್ಲಿ ಮನೆ ನಿರ್ಮಾಣವಾಗಿ ಅದನ್ನು ನೋಂದಣಿ ಮಾಡಿಕೊಂಡ ಪ್ರಕರಣಗಳಿಗೆ ಇ-ಖಾತಾ ಮಾಡಿಕೊಡಬೇಕು ಎಂದರು.

ನಗರಸಭೆ ಮಾಜಿ ಸದಸ್ಯ ಎನ್.ಕೆ.ಶ್ಯಾಮಸುಂದರ್, ಪ್ರಮುಖರಾದ ಚಂದ್ರಶೇಖರ್, ರಮೇಶ್, ಎಚ್.ಕೆ.ವಿಜಯಕುಮಾರ್, ರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net