ಅಂತಿಮ ಸೆಮಿಸ್ಟರ್​ ಪರೀಕ್ಷೆಯನ್ನೂ ರದ್ದುಗೊಳಿಸಿ; ವಿದ್ಯಾರ್ಥಿಗಳ ಭವಿಷ್ಯ ಕಾಪಾಡಿ; ಸಿಎಂ ಮನವಿಗೆ ಮಣಿಯುತ್ತಾರೆ ಮೋದಿ?

Exam
Published on

ನವದೆಹಲಿ: ಯುವ ಪೀಳಿಗೆ ಭವಿಷ್ಯದ ದೃಷ್ಟಿಯಿಂದ ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ವೈಯಕ್ತಿಕವಾಗಿ ಮನವಿ ಮಾಡುತ್ತಿದ್ದೇನೆ...! ಅಂತಿಮ ಸೆಮಿಸ್ಟರ್​, ವರ್ಷದ ಪರೀಕ್ಷೆಯನ್ನೂ ರದ್ದು ಮಾಡಿ...

ಯುಜಿಸಿ ಮಾರ್ಗಸೂಚಿ ಅನ್ವಯ, ಮಧ್ಯಂತರ ಸೆಮಿಸ್ಟರ್​ಗಳ ಪರೀಕ್ಷೆ ರದ್ದು ಮಾಡಲಾಗಿದ್ದರೂ, ಅಂತಿಮ ಸೆಮಿಸ್ಟರ್​ಗಳ ಪರೀಕ್ಷೆ ನಡೆಸುವುದಾಗಿ ಬೆಂಗಳೂರು ಸೇರಿ ವಿವಿಧ ವಿಶ್ವವಿದ್ಯಾಲಯಗಳು, ಕಾಲೇಜುಗಳು ಈಗಾಗಲೇ ಘೋಷಿಸಿವೆ.

ಆದರೆ, ಈ ಪರೀಕ್ಷೆಗಳನ್ನು ರದ್ದು ಮಾಡಿ ಎಂಬ ಒತ್ತಾಯವೂ ಕೇಳಿ ಬಂದಿದೆ. ವಿದ್ಯಾರ್ಥಿಗಳಳಿಂದ ಮಾತ್ರವಲ್ಲ, ಅವರ ಪರವಾಗಿ ಈ ಮನವಿ ಮಾಡಿದ್ದು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್​.

ದೆಹಲಿ ಸರ್ಕಾರದ ಕಾಲೇಜು ಹಾಗೂ ವಿವಿಗಳ ಅಂತಿಮ ಸೆಮಿಸ್ಟರ್​ ಪರೀಕ್ಷೆಯೂ ಸೇರಿ ಎಲ್ಲವನ್ನೂ ರದ್ದು ಮಾಡಲಾಗಿದೆ. ಆದರೆ, ದೆಹಲಿ ಹಾಗೂ ಇತರ ಕೇಂದ್ರೀಯ ವಿವಿಗಳ ಅಂತಿಮ ಪರೀಕ್ಷೆ ನಡೆಸುವುದಾಗಿ ಯುಜಿಸಿ ತಿಳಿಸಿದೆ. ಹೀಗಾಗಿ ಪ್ರಧಾನಿ ಮೋದಿಯೇ ಮಧ್ಯಪ್ರವೇಶಿಸಬೇಕೆಂದು ಕೇಜ್ರಿವಾಲ್​ ಒತ್ತಾಯಿಸಿದ್ದಾರೆ.

ಕೋವಿಡ್​ ಸಂಕಷ್ಟದ ಹಿನ್ನೆಲೆಯಲ್ಲಿ ಪರೀಕ್ಷೆ ನಡೆಸಲು ಕಷ್ಟವಾಗುವುದರಿಂದ ದೆಹಲಿ ಸರ್ಕಾರ ಎಲ್ಲ ಪರೀಕ್ಷೆಗಳನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net