ವಿದ್ಯಾರ್ಥಿಗಳಿಗೆ ವ್ಯವಹಾರ ಜ್ಞಾನ ಬಹಳ ಮುಖ್ಯ

4
ಚಿಕ್ಕೋಡಿ ಪಟ್ಟಣದ ಸಿಎಲ್‌ಇ ಸಂಸ್ಥೆಯ ಎಂ.ಕೆ.ಕವಟಗಿಮಠ ಶಾಲೆಯಲ್ಲಿ ಆಯೋಜಿಸಿದ್ದ ಮಾರುಕಟ್ಟೆ ದಿನ ಕಾರ್ಯಕ್ರಮವನ್ನು ಉಪನ್ಯಾಸಕಿ ದೀಪಾ ಕಮತೆ ಉದ್ಘಾಟಿಸಿದರು. ದೀಪಕ ಹಂಸಿ, ಸಾಗರ ಬಿಸ್ಕೋಪ್, ಡಿ.ಎಸ್ ಕೋಳಿ, ಬಿ.ಡಿ.ರೋಕಡೆ ಇದ್ದರು.
Published on

ಚಿಕ್ಕೋಡಿ: ವಿದ್ಯಾರ್ಥಿಗಳು ಮಾರುಕಟ್ಟೆಗೆ ಭೇಟಿ ನೀಡಿ ವ್ಯವಹಾರ ಜ್ಞಾನ ಗಳಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಮಾರುಕಟ್ಟೆ ದಿನ ಆಯೋಜಿಸಲಾಗಿದೆ ಎಂದು ಉಪನ್ಯಾಸಕಿ ದೀಪಾ ಕಮತೆ ಹೇಳಿದರು.

ಪಟ್ಟಣದ ಸಿಎಲ್‌ಇ ಸಂಸ್ಥೆಯ ಎಂ.ಕೆ.ಕವಟಗಿಮಠ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಮಾರುಕಟ್ಟೆ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗದಿದ್ದಲ್ಲಿ ರೈತರ ಜೀವನ ಕಷ್ಟವಾಗುತ್ತದೆ. ರೈತರನ್ನು ಎಲ್ಲರೂ ಗೌರವಿಸಬೇಕು ಎಂದರು.

ಉಪನ್ಯಾಸಕ ದೀಪಕ ಹಂಸಿ, ವಿದ್ಯಾರ್ಥಿಗಳಿಗೆ ಮಾರ್ಕೆಟಿಂಗ್ ವಿಭಾಗದ ಹಂತಗಳ ಬಗ್ಗೆ ವಿವರಿಸಿದರು. ಸಾಗರ ಬಿಸ್ಕೋಪ್ ಅಧ್ಯಕ್ಷತೆ ವಹಿಸಿದ್ದರು. ಡಿ.ಎಸ್ ಕೋಳಿ, ಬಿ.ಡಿ.ರೋಕಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net