

ಚಿಕ್ಕೋಡಿ: ಭಾವಿ ವಕೀಲರಿಗೆ ಉತ್ತಮ ನಡವಳಿಕೆ ಅವಶ್ಯ ಎಂದು ಬೆಳಗಾವಿಯ ರಾಜಾ ಲಖಮಗೌಡ ಕಾನೂನು ಮಹಾವಿದ್ಯಾಲಯದ ಉಪನ್ಯಾಸಕ ಡಾ.ಸಮಿನಾನಾಹಿದ್ ಬೇಗ್ ಹೇಳಿದರು.
ಪಟ್ಟಣದ ಕೆಎಲ್ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಅಣಕು ನ್ಯಾಯಾಲಯ, ವಿಚಾರಣೆ ವಕೀಲ ಮತ್ತು ನ್ಯಾಯಾಲಯದ ನಡುವಳಿಕೆ ದೃಷ್ಟಿಕೋನ ವಿಷಯದ ಕುರಿತು ಶುಕ್ರವಾರ ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಅವರು ಮತನಾಡಿ, ಕಕ್ಷಿದಾರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕೆಂದರು. ಪ್ರಾಚಾರ್ಯ ಡಾ.ಡಿ.ಬಿ.ಸೊಲಾಪುರೆ, ಉಪನ್ಯಾಸಕ ಎಲ್.ಎ.ಸರದಾರ ಮಾತನಾಡಿದರು.
ಉಪನ್ಯಾಸಕ ವಿ.ಎಸ್.ಬೀಳಗಿ, ದೀಪಾಲಿ ಪಾಟೀಲ, ಎಸ್.ಬಿ.ನಾಗರಾಳೆ, ಪ್ರಿಯಾಂಕ ಚವ್ಹಾಣ, ಎಸ್.ಡಿ.ಕಾಜಿ, ಪ್ರಭಾಕರ ಕಮತೆ, ಕೆ.ಎಲ್.ಕಾಂಬಳೆ, ಎಂ.ಎಂ.ಪಾಟೀಲ, ಆರ್.ಎಸ್.ಮುರದುಂಡೆ, ಎಸ್.ಡಿ.ಶಿರಹಟ್ಟಿ ಇತರರಿದ್ದರು. ದಿತ್ಯಾ ಪಾಟೀಲ ವಂದಿಸಿದರು.