ಕಾವೇರಿ 2.0ರಲ್ಲಿ ಪ್ರತ್ಯೇಕ ಲಾಗಿನ್ ಐಡಿಗೆ; ಪತ್ರ ಬರಹಗಾರರು ಮನವಿ

sub
Published on

ಬೆಂಗಳೂರು: ರಾಜ್ಯ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ ಪರವಾನಗಿ ಪಡೆದ (ದಸ್ತು) ಪತ್ರ ಬರಹಗಾರರಿಗೆ ಕಾವೇರಿ 2.0 ತಂತ್ರಾಂಶದಲ್ಲಿ ಪ್ರತ್ಯೇಕ ಲಾಗಿನ್ ಐಡಿ ನೀಡಬೇಕೆಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಕಂದಾಯ ಇಲಾಖೆಗೆ ಪತ್ರ ಬರೆದಿದ್ದಾರೆ.

ದಾವಣಗೆರೆ ಜಿಲ್ಲಾ ಪತ್ರ ಬರಹಗಾರರ ಒಕ್ಕೂಟದ ಮನವಿ ಮೇರೆಗೆ ಎಸ್.ಎಸ್. ಮಲ್ಲಿಕಾರ್ಜುನ್ ಅವರು, ಕಂದಾಯ ಸಚಿವ ಕೃಷ್ಣ ಬೈರೇಗೌಡಗೆ ಪತ್ರ ಬರೆದಿದ್ದಾರೆ. ಕಾವೇರಿ 2.0 ತಂತ್ರಾಂಶ ಜಾರಿ ಬಳಿಕ ಸಿಟಿಜನ್ ಲಾಗಿನ್‌ನಿಂದ ಯಾರು ಬೇಕಾದರು ನೋಂದಣಿಗೆ ದಸ್ತಾವೇಜು ಅಪ್‌ಲೋಡ್ ಮಾಡಬಹುದು. ಇದರಿಂದ ತಪ್ಪುಗಳು ನಡೆಯುತ್ತಿದ್ದು, ಸರ್ಕಾರದ ಬೊಕ್ಕಸಕ್ಕೆ ರಾಜಸ್ವ ನಷ್ಟ ಉಂಟಾಗುತ್ತಿದೆ. ರೈತಾಪಿ ವರ್ಗ ದಸ್ತಾವೇಜು ಅಪ್‌ಲೊಡ್ ಮಾಡಲು ಕಷ್ಟವಾಗುತ್ತಿದೆ. ಉಪ ನೋಂದಣಿ ಕಚೇರಿಗಳಲ್ಲಿ ಅನಧಿಕೃತ ವ್ಯಕ್ತಿಗಳು ಹೆಚ್ಚಾಗುತ್ತಿದ್ದಾರೆ.

ಆದರಿಂದ ಭೂಮಾಪನ ಇಲಾಖೆಯಲ್ಲಿ ಪರವಾನಗಿ ಹೊಂದಿದ ಭೂಮಾಪಕರಿಗೆ ಪ್ರತ್ಯೇಕ ಲಾಗಿನ್ ನೀಡಿರುವಂತೆ ಅಧಿಕೃತ ಪರವಾನಗಿ ಪಡೆದಿರುವ ಪತ್ರ ಬರಹಗಾರರಿಗೆ ಕಾವೇರಿ 2.0ರಲ್ಲಿ ಪ್ರತ್ಯೇಕ ಲಾಗಿನ್ ವ್ಯವಸ್ಥೆ ಮಾಡಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇದಲ್ಲದೆ, ಪತ್ರ ಬರಹಗಾರರ ನೇಮಕಾತಿಗೆ ಅರ್ಜಿ ಕರೆದು 13 ವರ್ಷಗಳು ಕಳೆದಿದೆ. ಶೀಘ್ರದಲ್ಲಿ ಪತ್ರ ಬರಹಗಾರರಿಗೆ ಪರವಾನಗಿ ನೀಡುವ ವ್ಯವಸ್ಥೆ ಆಗಬೇಕೆಂದು ಕಂದಾಯ ಇಲಾಖೆಗೆ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net