

ಮಾಗಡಿ : ಆಹಾರ ಸಾಮಗ್ರಿ ತೀರಾ ಅವಶ್ಯಕತೆ ಇರುವಂತಹವರಿಗೆ ನೀಡಿದರೆ ಅದಕ್ಕೊಂದು ಅರ್ಥ ಬರುತ್ತದೆ. ಆದರೆ ಓಟಿನ ರಾಜಕೀಯ ಮಾಡುವ ದೃಷ್ಟಿಯಿಂದ ನೀಡಿದರೆ ತಪ್ಪಾಗುತ್ತದೆ ಎಂದು ಶಾಸಕ ಎ.ಮಂಜುನಾಥ್ ಹೇಳಿದರು.
ಪಟ್ಟಣದ ಕಲ್ಯಾಗೇಟ್ ವೃತ್ತದಲ್ಲಿ ಕರೊನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ಮಾಡಿದವರ ಸನ್ಮಾನ ಹಾಗೂ ಬಡವರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದಲ್ಲಿ ಎಷ್ಟೋ ಮಂದಿ ಒಂದೊತ್ತಿನ ಊಟ, ಔಷಧಕ್ಕೆ ಪರದಾಡುತ್ತಿದ್ದಾರೆ.
ಅಂತಹವರಿಗೆ ಸಹಾಯ ಮಾಡಬೇಕು. ಕರೊನಾ ಸಂಕಷ್ಟದಲ್ಲಿ ಕೆ.ಪಿ. ಮಹದೇವಶಾಸಿ ಅವರು ಬಡವರ ನಿರಂತರ ಸೇವೆ ಮಾಡುತ್ತಿರುವುದು ಶ್ಲಾಘನೀಯ ಎಂದರು.
ಸಮಾಜ ಸೇವಕ ಕೆ.ಪಿ.ಮಹದೇವ ಶಾಸ್ತ್ರಿ ಮಾತನಾಡಿ, ಕರನೊ ಬಗ್ಗೆ ಜನರು ಉದಾಸೀನ ತೋರದೆ ಮಾಸ್ಕ್ ಧರಿಸಿ ಪರಸ್ಪರ ಅಂತರ ಕಾಯ್ದುಕೊಂಡು ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು.
ಪುರಸಭೆ ಅಧ್ಯಕ್ಷೆ ಭಾಗ್ಯಮ್ಮ, ಉಪಾಧ್ಯಕ್ಷ ರೆಹಮತ್, ಸದಸ್ಯರಾದ ಎಂ.ಎನ್.ಮಂಜುನಾಥ್, ಅನಿಲ್ ಕುಮಾರ್, ಎಂ.ಆರ್.ರೇಖಾ, ಅಶ್ವತ್ಥ್, ಜಯರಾಮು, ಮಾಜಿ ಸದಸ್ಯ ಮಹೇಶ್, ರೂಪೇಶ್,ನಯಾಜ್, ತಾ.ಪಂ.ಮಾಜಿ ಸದಸ್ಯ ನರಸಿಂಹಮೂರ್ತಿ, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ತಮ್ಮಣ್ಣಗೌಡ,ಎಪಿಎಂಸಿ ನಿರ್ದೆಶಕ ಮಂಜುನಾಥ್, ಚಂದ್ರಣ್ಣ, ಮುನಿಕೃಷ್ಣ, ಹೇಮಂತ್ ಕುಮಾರ್
ಇತರರು ಇದ್ದರು.