ಆಹಾರ ಮೇಳದಲ್ಲಿ ಮಕ್ಕಳಿಂದ ವಹಿವಾಟು

20 KRN-2
Published on

ಕೆ.ಆರ್.ನಗರ : ವಿವಿಧ ವಸ್ತುಗಳಿಗೆ ನಿಗದಿತವಾದ ಬೆಲೆ. ಕೊಳ್ಳುಗರ ಚೌಕಾಸಿಗೆ ಜಾಗವೇ ಇಲ್ಲ. ಹತ್ತಾರು ಬಗೆಯ
ರುಚಿಕರ ಆಹಾರ ತಿನಿಸುಗಳ ಸಾಲು ಸಾಲು. ಕೊಂಡು ತಿಂದವರ ಮೆಚ್ಚುಗೆ. ಇದು ಪಟ್ಟಣದ ಬಿ.ಎಸ್.ಮಾದಪ್ಪ ಸ್ಮಾರಕ ವಿದ್ಯಾ ಸಂಸ್ಥೆಯ ಆವರಣದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು ಬಿ.ಜಿ.ಪಬ್ಲಿಕ್ ಸ್ಕೂಲ್‌ನ ಪ್ರಾಥಮಿಕ ವಿಭಾಗದ ಮಕ್ಕಳೇ ಶನಿವಾರ ನಡೆಸಿದ ಆಹಾರ ಮೇಳದಲ್ಲಿ ಕಂಡು ಬಂದ ದೃಶ್ಯಗಳು. ಶಾಲೇ ವಿದ್ಯಾರ್ಥಿಗಳು ತಮ್ಮ ತಮ್ಮಲ್ಲೇ ಗುಂಪು ಮಾಡಿಕೊಂಡು ವಿವಿಧ ರೀತಿಯ ತಿಂಡಿ ತಿನಿಸುಗಳನ್ನು ಸ್ಥಳದಲ್ಲೇ ಸಿದ್ಧ್ದಪಡಿಸಿ ವ್ಯಾಪಾರ ಮಾಡಿದ್ದು ಗಮನ ಸೆಳೆಯಿತು. ಆಹಾರ ಮೇಳದಲ್ಲಿ ರೊಟ್ಟಿ, ಚಟ್ನಿ, ಜಾಮೂನು, ರವೆ ಉಂಡೆ, ಚಕ್ಕುಲಿ, ನಿಪ್ಪಟ್ಟು, ಕಜ್ಜಾಯ, ಕೋಡುಬಳೆ ಮತ್ತು ವಿವಿಧ ಬಗೆಯ ಜ್ಯೂಸ್ ಮತ್ತು ತರಕಾರಿ ವ್ಯಾಪಾರ ಭರಾಟೆ ಜೋರಾಗಿತ್ತು. ಶಿಕ್ಷಕರು, ಪಾಲಕರು ಮತ್ತು ವಿದ್ಯಾರ್ಥಿ ಸಮೂಹ ರುಚಿ ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ಮುಖ್ಯಶಿಕ್ಷಕ ಕೆ.ಆರ್.ಗಣೇಶ್ ಪ್ರಸಾದ್ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ,
ಮಕ್ಕಳಿಗೆ ವ್ಯವಹಾರ ಜ್ಞಾನ ರೂಢಿಗತವಾಗಲಿ, ವಿವಿಧ ಉತ್ಪನ್ನ ತಯಾರಿ ಮಾಡುವ ಹಿನ್ನೆಲೆ ತಿಳಿಯಲಿ ಎಂಬ ಉದ್ದೇಶದಿಂದ ಮೇಳ ಆಯೋಜನೆ ಮಾಡಲಾಗಿದೆ ಎಂದರು. ಪ್ರಾಂಶುಪಾಲರಾದ ವಿನುತಾ, ದೈಹಿಕ ಶಿಕ್ಷಣ ಶಿಕ್ಷಕ ಶಶಿಕಿರಣ್, ಸಹ ಶಿಕ್ಷಕರಾದ ರಜಿನಿ, ಶ್ರುತಿ, ಕುಮಾರಿ, ಇಮ್ರಾನ್, ಶ್ವೇತಾ, ಸೌಂದರ್ಯಾ, ನಂದಿನಿ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net