

Beauty secrete: ವಯಸ್ಸಾದಂತೆ ಚರ್ಮವು ಜೋತು ಬೀಳಲು ಆರಂಭಿಸಿ, ನೈಸರ್ಗಿಕ ಹೊಳಪನ್ನು ಕಳೆದುಕೊಳ್ಳಲು ಪ್ರಾರಂಭಿಸುತ್ತದೆ. ಇದರಿಂದ ನಮ್ಮ ಕಣ್ಣಿ ಸುತ್ತ ಇರುವ ವರ್ತುಲಗಳು ಕಪ್ಪಗಾಗಲು ಪ್ರಾರಂಭಿಸುತ್ತದೆ. ಇದು ಚರ್ಮವನ್ನು ಕುಗ್ಗಿಸುತ್ತದೆ. ಇದು ಚರ್ಮದಲ್ಲಿರುವ ಕಾಲಜನ್ ಮತ್ತು ಎಲಾಸ್ಟಿನ್ ಪ್ರೋಟೀನ್‌ಗಳ ಪ್ರಮಾಣದಲ್ಲಿನ ಇಳಿಕೆಯಿಂದ ಈ ರೀತಿಯ ಸಮಸ್ಯೆಗಳು ಬರಲಾರಂಭಿಸುತ್ತವೆ.
ಈ ತೊಂದರೆಯಿಂದ ಹೊರ ಬರುವ ಸಲುವಾಗಿ ಹಲವಾರು ಜನರು ದುಬಾರಿ ಕ್ರೀಮ್ಗಳು ಇಲ್ಲವೇ, ಚಿಕಿತ್ಸೆಗಾಗಿ ಆಸ್ಪತ್ರೆ ಮೊರೆ ಹೋಗುತ್ತಾರೆ. ಚಿಕಿತ್ಸೆ ತೆಗೆದುಕೊಳ್ಳುವ ಬದಲು ನಿಮ್ಮ ಮನೆಯಲ್ಲಿಯೇ ನೈಸರ್ಗಿಕವಾದ ಮನೆಮದ್ದು ಬಳಸಿ ಇವು ಚರ್ಮವನ್ನು ಅಂದವಾಗಿ ಕಾಣುವಂತೆ ಮಾಡುತ್ತದೆ. ಹಾಗಾಗಿ ಕೆಳಗೆ ನೀಡಿರುವ ಮನೆಮದ್ದುಗಳನ್ನು ಬಳಸಿ ಯೌವನಕ್ಕೆ ಮತ್ತೆ ಮರಳಿ.....
ಅಲೋವೆರಾ ಜೆಲ್ ಚರ್ಮಕ್ಕೆ ಅಗತ್ಯವಿರುವ ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ನೀಡುತ್ತವೆ. ಆದರಿಂದ ಅಲೋವೆರಾ ಜೆಲ್ನನ್ನು ನೇರವಾಗಿ ಮುಖಕ್ಕೆ ಹಚ್ಚಿ 15-20 ನಿಮಿಷ ಬಿಟ್ಟು ತಣ್ಣೀರಿನಲ್ಲಿ ತೊಳೆಯುವುದರಿಂದ ಚರ್ಮವನ್ನು ತೇವಗೊಳಿಸುತ್ತದೆ. ಇದು ಮುಖದ ಉರಿಯೂತವನ್ನು ಕಡಿಮೆ ಮಾಡಿ. ಚರ್ಮಕ್ಕೆ ಹೊಳಪನ್ನು ನೀಡಲು ಸಹಾಯ ಮಾಡುತ್ತದೆ.
ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲವಿದ್ದು, ಇದು ಸತ್ತ ಚರ್ಮದ ಕೋಶಗಳನ್ನು ತೆಗೆದುಹಾಕಿ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಆದರಿಂದ ಮೊಸರನ್ನು ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಇದು ಚರ್ಮವನ್ನು ಪೋಷಿಸುವುದರ ಜೊತೆಗೆ ಹೊಳೆಯುವಂತೆ ಮಾಡುತ್ತದೆ. ಪ್ರತಿನಿತ್ಯ ಇದನ್ನು ಬಳಸುವುದರಿಂದ ಚರ್ಮವು ತೇವಾಂಶವನ್ನು ಉಳಿಸಿಕೊಳ್ಳುತ್ತದೆ.
ಮುಲ್ತಾನಿ ಮಿಟ್ಟಿ ಚರ್ಮವನ್ನು ಬಿಗಿಗೊಳಿಸಲು ಬಳಸುವಂತಹ ಸೌಂದರ್ಯವರ್ಧಕವಾಗಿದೆ. ಇದರಲ್ಲಿರುವ ಖನಿಜಗಳು ಚರ್ಮದ ಪೋಷಣೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಈ ಪುಡಿಯನ್ನು ಗುಲಾಬಿ ನೀರಿನೊಂದಿಗೆ ಹಚ್ಚಿ ಸುಮಾರು 20 ನಿಮಿಷಗಳ ಕಾಲ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ಇದು ಚರ್ಮದಲ್ಲಿರುವ ರಂಧ್ರವನ್ನು ಸ್ವಚ್ಛವಾಗಿರುವಂತೆ ಮಾಡುತ್ತದೆ. ಹಾಗೆಯೇ ಚರ್ಮವನ್ನು ಕಾಂತಿಯುತವಾಗಿ ಕಾಣುವಂತೆ ಮಾಡುತ್ತದೆ.
ಸೌತೆಕಾಯಿಯಲ್ಲಿ ಬಹಳಷ್ಟು ನೀರು ಇರುವುದರಿಂದ ಚರ್ಮವು ತೇವಾಂಶದಿಂದ ಕೂಡಿರುತ್ತದೆ. ಹಾಗಾಗಿ ಸೌತೆಕಾಯಿಯನ್ನು ಮಿಕ್ಸಿ ಮಾಡಿ ಅದರ ರಸವನ್ನು ಚರ್ಮಕ್ಕೆ ಸಿಂಪಡಿಸಿ 20 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ. ಇದು ಸೂರ್ಯನ ಕಿರಣಗಳಿಂದ ರಕ್ಷಿಸುತ್ತದೆ. ಹಾಗೆಯೇ ಟೊಮೊಟೋ ಪೇಸ್ಟ್ನ್ನು ವಾರಕ್ಕೆ 2 ದಿನ ಮುಖಕ್ಕೆ ಹಚ್ಚಿರಿ ಇದು ಮುಖದಲ್ಲಿರುವ ಪಿಗ್ಮಂಟೇಶನ್ ಮತ್ತು ಟ್ಯಾನಿಂಗ್ನ್ನು ಕಡಿಮೆ ಮಾಡಿ ಯೌವನದಿಂದ ಕಾಣುವಂತೆ ಮಾಡುತ್ತದೆ. (ಏಜೆನ್ಸೀಸ್)