ಸೋಮವಾರಪೇಟೆಯಲ್ಲಿ ಜನಪದ ಹಬ್ಬ ಓಣಂ ಆಚರಣೆ

05SPT3
Published on

ಸೋಮವಾರಪೇಟೆ: ಮಲೆಯಾಳಿ ಜನಾಂಗದ ಜನಪದ ಹಬ್ಬ ಓಣಂ ಅನ್ನು ಗುರುವಾರ ಮಲಯಾಳಿ ಸಮುದಾಯದವರು ತಾಲೂಕಿನೆಲ್ಲಡೆ ಸಂಭ್ರಮದಿಂದ ಆಚರಿಸಿದರು.

ಮನೆಗಳಲ್ಲಿ ಹೂವಿನ ಪೂಕಳಂ ರಚಿಸಿ ಕುಟುಂಬದವರೊಂದಿಗೆ ಸಂಭ್ರಮಿಸಿದರು. ಮಹಾಬಲಿ ಚಕ್ರವರ್ತಿಯ ಸುವರ್ಣಯುಗವನ್ನು ಸ್ಮರಿಸುವ ನಿಟ್ಟಿನಲ್ಲಿ ಆಚರಿಸಲಾಗುವ ಈ ಹಬ್ಬದಲ್ಲಿ ಸಮಾಜದಲ್ಲಿ ಸಮಾನತೆ ಮತ್ತು ಬಾಂಧವ್ಯದ ಸಂದೇಶ ಸಾರುವ ಹಬ್ಬವಾಗಿದೆ. ಜನರು ಹೊಸ ವಸ್ತ್ರ ತೊಟ್ಟು ಬಂಧುಬಳಗದವರೊಂದಿಗೆ ಸಿಹಿ ಸವಿದು ಹಬ್ಬವನ್ನು ಆಚರಿಸಿದರು.

ಪಟ್ಟಣದ ರೇಂಜರ್ ಬ್ಲಾಕ್ ನಲ್ಲಿ ವಕೀಲರಾದ ಪದ್ಮನಾಭ ಅವರ ಕುಟುಂಬಸ್ಥರು ಓಣಂ ಹಬ್ಬದ ಪ್ರಯುಕ್ತ ಹೂವಿನ ಪೂಕಳಂ ರಚಿಸಿದರು. ಈ ಸಂದರ್ಭ ಪತ್ನಿ ಪುಷ್ಪಾವತಿ, ಪುತ್ರಿ ವಿದ್ಯಾಲಕ್ಷ್ಮೀ ಹಾಗೂ ತಾಯಿ ಲಕ್ಷ್ಮೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net