

ಕೋಲಾರ: ತಮಿಳುನಾಡು ಗಡಿಯಲ್ಲಿ ಆನೆಗಳ ಹಾವಳಿ ಹೆಚ್ಚಾಗಿದ್ದು, ಬೆಳೆಗಳನ್ನು ನಾಶ ಮಾಡಿರುವ ರೈತರಿಗೆ ಪ್ರತಿ ಎಕರೆಗೆ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ, ನಗರ ಹೊರವಲಯದ ಅರಣ್ಯ ಇಲಾಖೆ ಎದುರು ಪ್ರತಿಭಟನೆ ನಡೆಸಿ ಡಿಸಿಎ್ ಏಡುಕೊಂಡಲು ಅವರಿಗೆ ಮನವಿ ಸಲ್ಲಿಸಿದರು.
ಸಂಘದ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಮಾಲೂರು, ಬಂಗಾರಪೇಟೆ ಹಾಗೂ ಕೆಜಿಎ್ ಗಡಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ, ಇದರಿಂದ ರೈತರು ಹೈರಾಣರಾಗಿದ್ದು, ತಡೆಗಟ್ಟಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮುಂಗಾರು ಬೆಳೆಗಳು ಬೆಳೆದು ನಿಂತಿದ್ದವು, ಹಿಂಗಾರು ಮಳೆಗೆ ಸಲು ಸಿಗಬಹುದು ಎಂಬ ನಿರೀೆಯಿತ್ತು, ಆದರೆ ಆನೆಗಳ ದಾಳಿಯಿಂದಾಗಿ ಕೈಗೆ ಬಂದು ತ್ತುತ್ತು ಬಾಯಿಗೆ ಬಾರದಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಗಡಿಭಾಗದ ರೈತರ ಪಾಲಿಗೆ ಕ್ಷೇತ್ರದ ಜನ ಪ್ರತಿನಿಧಿಗಳು ಅರಣ್ಯ ಅಧಿಕಾರಿಗಳು ಇದ್ದು, ಇಲ್ಲದಂತಾಗಿದ್ದಾರೆ. ಕಾಡಾನೆಗಳ ಹಾವಳಿಯಿಂದ ಬೆಳೆ ನಷ್ಟವಾಗುತ್ತಿದ್ದರೂ ಕನಿಷ್ಠಪಕ್ಷ ಸೌಜನ್ಯಕ್ಕಾದರೂ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ತಿಳಿಸುವ ಪ್ರಯತ್ನ ಮಾಡಿಲ್ಲ ಎಂದು ದೂರಿದರು.
ಆನೆಗಳ ಹಾವಳಿ ನಿಯಂತ್ರಿಸಲು ಸೋಲಾರ್ ತಂತಿ ಬೇಲಿ ನಿರ್ಮಿಸಿದ್ದು, ಅದೂ ಈಗ ಕೆಲಸಕ್ಕೆ ಬಾರದಂತಾಗಿದೆ. ಇದಕ್ಕು ಮೊದಲು ಕಂದಕಗಳನ್ನು ನಿರ್ಮಿಸಿದ್ದರೂ ಸಹ ಏನು ಪ್ರಯೋಜನವಾಗಲಿಲ್ಲ. ರೈಲ್ವೆ ಬ್ಯಾರಿಕೇಡ್ಗಳನ್ನು ನಿರ್ಮಿಸಿ ತಮಿಳುನಾಡಿನಿಂದ ಜಿಲ್ಲೆಗೆ ಕಾಡಾನೆಗಳು ಬಾರದಂತೆ ತಡೆಯಬೇಕು ಎಂದು ಕೋರಿದರು.
ಒಂದು ವಾರದೊಳಗೆ ಕಾಡಾನೆ ಹಾಗೂ ಕಾಡು ಹಂದಿಗಳ ಹಾವಳಿಯಿಂದ ನಷ್ಟವಾಗಿರುವ ಪ್ರತಿ ಎಕರೆಗೆ 5 ಲಕ್ಷ ಪರಿಹಾರ ವಿತರಣೆ ಮಾಡಬೇಕು. ಕಾಡಾನೆಗಳನ್ನು ನಿಯಂತ್ರಿಸಲು ವಿಶೇಷ ತಂಡ ರಚನೆ ಮಾಡಿ ಸರ್ಕಾರದ ಮೇಲೆ ಒತ್ತಡ ಹಾಕಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಮಾತನಾಡಿ, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಕಾಡಾನೆಗಳಿಂದ ರೈತರ ಬೆಳೆ, ಪ್ರಾಣ ರಕ್ಷಣೆ ಮಾಡುವ ಜತೆಗೆ ಧ್ವನಿವರ್ದಕ ಮೂಲಕ ರೈತರಲ್ಲಿ ಜಾಗೃತಿ ಮೂಡಿಸಿ ಬೆಳೆ ಪರಿಹಾರವನ್ನು ಶೀಘ್ರ ಬಿಡುಗಡೆ ಮಾಡುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಸಂಘ ಪದಾಧಿಕಾರಿಗಳಾದ ಈಕಂಬಳ್ಳಿ ಮಂಜುನಾಥ, ಮರಗಲ್ ಶ್ರೀನಿವಾಸ್, ಲಕ್ಷಣ್, ಗೋವಿಂದಪ್ಪ, ಸುರೇಶ್, ಹೋ.ಅ ಮುನಿಕೃಷ್ಣ, ಕಿರಣ್, ಚಾಂದ್ಪಾಷಾ, ಯಾರಂಘಟ್ಟ ಗಿರೀಶ್, ಅಪ್ಪೋಜಿರಾವ್, ಶೈಲಜ, ರಾಧಾ, ಶೋಭಾ, ಚೌಡಮ್ಮ, ಲಕ್ಷಮ್ಮ, ಸುಗುಣಾ ಪಾಲ್ಗೊಂಡಿದರು.